ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಜೆಂಡ್ಸ್ ಪ್ರೀಮಿಯರ್ ಲೀಗ್: ಮೈಸೂರು ಮಹಾರಾಜಾಸ್‌ ತಂಡಕ್ಕೆ ಟ್ರೋಫಿ

Published 22 ಮೇ 2023, 6:20 IST
Last Updated 22 ಮೇ 2023, 6:20 IST
ಅಕ್ಷರ ಗಾತ್ರ

ಮೈಸೂರು: ಚಂದ್ರಶೇಖರ್‌ ಅವರ ಬ್ಯಾಟಿಂಗ್ (16 ರನ್‌) ಬಲದಿಂದ ‘ಮೈಸೂರು ಮಹಾರಾಜಾಸ್‌’ ತಂಡವು ‘ಲೆಜೆಂಡ್ಸ್ ಪ್ರೀಮಿಯರ್ ಲೀಗ್ ಟಿ–10’ ಟೂರ್ನಿಯ ಚಾಂಪಿಯನ್ ಆಯಿತು.

ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಮೈಸೂರು ಲ್ಯಾನ್ಸರ್ಸ್‌ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಮಳೆ ಕಾರಣದಿಂದಾಗಿ 10 ಓವರ್‌ಗಳ ಪಂದ್ಯವನ್ನು 5 ಓವರ್‌ಗೆ ಇಳಿಸಲಾಗಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಲ್ಯಾನ್ಸರ್ಸ್ ತಂಡಕ್ಕೆ ಎ.ಸಿ.ಚೇತನಕುಮಾರ್ (21, 1x6, 2x4) ನೆರವಾದರು‌.‌ ತಂಡವು 5 ವಿಕೆಟ್ ನಷ್ಟಕ್ಕೆ 32 ರನ್‌ ಗುರಿ ನೀಡಿತು. ಮಹಾರಾಜಾಸ್‌ ತಂಡದ ಸಿ.ಸುನೀಲ್‌, ಸಿ.ರಾಘವೇಂದ್ರ, ಸಿ.ಕೆ.ಚಂದ್ರಶೇಖರ್‌ ಮತ್ತು ಎಂ.ಕೆ.ಸಪ್ತಗಿರೀಶ್‌ ತಲಾ ಒಂದು ವಿಕೆಟ್ ಪಡೆದರು.

ಗುರಿಯನ್ನು ಬೆನ್ನಟ್ಟಿದ ಮಹಾರಾಜಾಸ್‌ ತಂಡವು ಕೇವಲ 2.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.

ಮೈಸೂರು ಲ್ಯಾನ್ಸರ್ಸ್‌ ತಂಡದ ಎ.ವಿ.ಸಂದೀಪ್‌ಗೆ ಉತ್ತಮ ಬ್ಯಾಟರ್, ಎ.ಸಿ.ಚೇತನ್‌ಗೆ ಉತ್ತಮ ಫೀಲ್ಡರ್‌ ಹಾಗೂ ಮಹಾ ರಾಜಾಸ್‌ ತಂಡದ ಸುನೀಲ್‌ ಚಿನ್ನಸ್ವಾಮಿಗೆ ಉತ್ತಮ ಬೌಲರ್‌ ಪ್ರಶಸ್ತಿ ಪಡೆದರು. ಮೈಸೂರು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ವಿಜೇತ ತಂಡಕ್ಕೆ ಟ್ರೋಫಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT