ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ನಗರ: ಚಿರತೆ ದಾಳಿ, ನಾಲ್ಕು ಮಂದಿಗೆ ಗಾಯ-ಸೆರೆ

Last Updated 4 ನವೆಂಬರ್ 2022, 8:59 IST
ಅಕ್ಷರ ಗಾತ್ರ

ಕೆ.ಆರ್.ನಗರ: ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡ ಚಿರತೆ ನಾಲ್ವರ ಮೇಲೆ ಎಗರಿ ಗಾಯಗೊಳಿಸಿದೆ.

ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಮತ್ತು ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಗಾಯಗೊಂಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಜನರಲ್ಲಿ ಭಯ ಉಂಟು ಮಾಡುತ್ತಿತ್ತು, ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೂ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಅಲ್ಲಗಳೆದಿದ್ದರು.

ಗುರುವಾರ ಸಂಜೆ ಸುಮಾರು 7ಗಂಟೆಯಲ್ಲಿ ಕಾಲೇಜು ಬಳಿ ಮತ್ತೆ ಕಾಣಿಸಿಕೊಂಡಿದೆ ಎಂದು ಹೇಳಿದಾಗ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿ ರಾತ್ರಿ 10ಗಂಟೆಯವರೆಗೂ ಕಾಲೇಜು ಸುತ್ತ ಜಾಲಾಡಿದ್ದಾರೆ. ಆದರೆ ಚಿರತೆ ಬಗ್ಗೆ ಸುಳಿವು ಸಿಗಲಿಲ್ಲ,ಆದರೂ ಇದೊಂದು ಹುಸಿ ಹೇಳಿಕೆಯಾಗಿರಬಹುದು ಎಂದು ಸುಮ್ಮನಾಗಿದ್ದರು. ಪಟ್ಟಣದ ಮುಳ್ಳೂರು ರಸ್ತೆ, ರಾಜ್ ಪ್ರಕಾಶ್ ಶಾಲೆ ಬಳಿ ಶುಕ್ರವಾರ ಬೆಳಿಗ್ಗೆ ಸುಮಾರು 8 ಗಂಟೆಗೆ ಸಾರ್ವಜನಿಕರಿಗೆ ಕಾಣಿಸಿಕೊಂಡ ಚಿರತೆ ಪಟ್ಟಣದ ಕನಕನಗರ ನಿವಾಸಿಗಳಾದ ವೆಂಕಟೇಶ್, ಕರಿಗೌಡ, ಪರಶಿವ ಅವರ ಮೇಲೆ ಎಗರಿ ಗಾಯಗೊಳಿಸಿದೆ, ಚಿರತೆ ಹಿಡಿಯಲು ಬಂದಿದ್ದ ಅರಣ್ಯಾಧಿಕಾರಿ ಮಂಜು ಅವರ ಮೇಲೂ ದಾಳಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT