ಮೈಸೂರು: ನಗರದ ನೈರುತ್ಯ ಭಾಗದಲ್ಲಿ ವಿಶಾಲವಾಗಿ ಹರಡಿರುವ ‘ಲಿಂಗಾಂಬುಧಿ ಕೆರೆ’ ಜೀವವೈವಿಧ್ಯದ ಆಗರ. ದಶಕದ ಹಿಂದೆ ರಿಂಗ್ ರಸ್ತೆಯಿಂದ ನಾಶವಾಗುವುದನ್ನು ತಪ್ಪಿಸಿದ್ದರಿಂದ ಬಹುದೊಡ್ಡ ಹಸಿರು ವಲಯ ನಗರಕ್ಕೆ ಉಳಿದಿದೆ.

ಕೆರೆಯ ಜಲಾನಯನ ಪ್ರದೇಶವು 22 ಚದರ ಕಿ.ಮೀ ವ್ಯಾಪಿಸಿದೆ. ದೊಡ್ಡಕೆರೆ, ಜೀವರಾಯನಕಟ್ಟೆ, ಸುಬ್ಬರಾಯನಕೆರೆ ನಂತರ ಕುಕ್ಕರಹಳ್ಳಿ, ಕಾರಂಜಿ ಹಾಗೂ ಲಿಂಗಾಂಬುಧಿ ಕೆರೆಗಳನ್ನು ಮುನ್ನೂರು ವರ್ಷಗಳ ಹಿಂದೆ ನಿರ್ಮಿಸಲಾಯಿತು.

ಮಹಾರಾಣಿ ಕೃಷ್ಣವಿಲಾಸ ಲಿಂಗರಾಜಮ್ಮಣ್ಣಿ ಸವಿನೆನಪಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ 1828ರಲ್ಲಿ 250 ಎಕರೆ ವಿಸ್ತೀರ್ಣದ ಲಿಂಗಾಂಬುಧಿ ಕೆರೆಯನ್ನು ಕಟ್ಟಿಸಿದರು. 150 ಎಕರೆಯಲ್ಲಿ ಜಲರಾಶಿಯಿದ್ದರೆ, 100 ಎಕರೆಯಲ್ಲಿ ಮೀಸಲು ಅರಣ್ಯ ಹಬ್ಬಿದೆ. ಐತಿಹಾಸಿಕ ಮಹಾಲಿಂಗೇಶ್ವರ ದೇಗುಲವೂ ಕೆರೆ ಆವರಣದಲ್ಲಿದೆ. ಕೆರೆ ಏರಿಯಲ್ಲಿ ಕಲ್ಲಿನ ಮಂಟಪವಿದೆ. ಹತ್ತು ವರ್ಷದ ಹಿಂದೆ ತಂತಿ ಬೇಲಿ ಹಾಕಿ ಮುಚ್ಚಲಾಗಿದೆ.

ಪಾರಂಪರಿಕ ಮಹತ್ವವಿರುವ ಕೆರೆಗೆ ಒತ್ತುವರಿ ಪ್ರಯತ್ನವೂ ನಡೆದಿದೆ. ಕೆರೆಯ ಮೇಲಿನ ಭಾಗದಲ್ಲಿದ್ದ ಜಾಗಗಳನ್ನು ಸಿ.ಎ ನಿವೇಶನಗಳನ್ನಾಗಿ ಹಂಚಿಕೆ ಮಾಡಲಾಗಿದೆ. ಕೆರೆಯ ಕೆಳಭಾಗದಲ್ಲಿನ ಅಚ್ಚುಕಟ್ಟಿನಲ್ಲಿ ಮೊದಲೆಲ್ಲ ಕೃಷಿ ನಡೆಯುತ್ತಿತ್ತು. ಈಗ ಅಲ್ಲಿ ಬಡಾವಣೆಗಳು ಮೇಲೆದ್ದಿವೆ.

ಐಯುಸಿಎನ್ ಕೆಂಪುಪಟ್ಟಿಯಲ್ಲಿ ಬರುವ ಹಲವು ಬಾನಾಡಿಗಳ ಆಶ್ರಯ ತಾಣವಾದ ‘ಜಲನಿಧಿ’ಯ ನಿರ್ವಹಣೆಯನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಮಧ್ಯ ಏಷ್ಯಾದಿಂದ ಬರುವ ವಲಸೆ ಹಕ್ಕಿಗಳ ಆಶ್ರಯ ತಾಣವಾಗಿದೆ. 210 ವಿವಿಧ ಜಾತಿಯ ಹಕ್ಕಿಗಳಿದ್ದು, 44 ಜೌಗು ಹಕ್ಕಿಗಳು ಹಾಗೂ 18 ವಲಸೆ ಹಕ್ಕಿಗಳು ಇಲ್ಲಿವೆ. ಉಳಿದವು ಸ್ಥಳೀಯ ಹಕ್ಕಿಗಳಾಗಿವೆ. ಇಲ್ಲಿನ ದ್ವೀಪಗಳು, ತೀರದಲ್ಲಿ 3 ಸಾವಿರ ಹಕ್ಕಿಗಳು ನೆಲೆಸಿವೆ. ಅದಲ್ಲದೇ 54 ಜಾತಿಯ ಬಣ್ಣದ ಚಿಟ್ಟೆಗಳನ್ನು ಪರಿಸರ ತಜ್ಞರು ಗುರುತಿಸಿದ್ದಾರೆ.

ಅರಣ್ಯ ಇಲಾಖೆಯು ಕೆರೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು, ಬಾನಾಡಿಗಳಿಗೆ ತೊಂದರೆ ಆಗುತ್ತದೆಂದು ವಾಯುವಿಹಾರಿ ನಡಿಗೆ ಪಥವನ್ನು ಕೆರೆ ಪಕ್ಕದಲ್ಲಿ ಹೆಚ್ಚು ಮಾಡಿಲ್ಲ. ವೀಕ್ಷಣಾ ಗೋಪುರವಿದ್ದು, ಕೆರೆಯ ಸೌಂದರ್ಯ ಕಣ್ತುಂಬಿಕೊಳ್ಳಬಹುದು.

‘1980ರಲ್ಲಿ ನಗರವು ಬೆಳೆದಿರಲಿಲ್ಲ. ಅಂದಿನಿಂದಲೇ ಕೆರೆ ಉಳಿವಿಗೆ ಹೋರಾಟ ನಡೆದಿವೆ. ಆಗ ತ್ಯಾಜ್ಯವನ್ನು ಸುರಿಯಲಾಗುತ್ತಿತ್ತು. ಅಲ್ಲದೇ ಕೊಳಚೆ ಪ್ರದೇಶ ನಿರ್ಮಾಣವೂ ಆಗಿತ್ತು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ತೆರವು ಮಾಡಲಾಯಿತು. ನಂತರ ಅರಣ್ಯ ಇಲಾಖೆಗೆ ಕೆರೆಯ ಹಸ್ತಾಂತರವೂ ಆಯಿತು. ಅದರಿಂದ ಕೆರೆ ಹಾಗೂ ಅದರ ಜೊತೆಗಿದ್ದ ಭೂಮಿ ಉಳಿಯಿತು’ ಎಂದು ಪರಿಸರ ತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2000ರಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಕೆರೆ ಅಭಿವೃದ್ಧಿಗೆ ₹ 2 ಕೋಟಿ ಅನುದಾನ ನೀಡಿತ್ತು. ಈ ವೇಳೆ ರಿಂಗ್ ರಸ್ತೆಯೂ ಹಾದು ಹೋಗುತ್ತಿತ್ತು. ನಿವೃತ್ತ ಮೇಜರ್ ಜನರಲ್ ಸುಧೀರ್ ಒಂಬತ್ಕೆರೆ ಸೇರಿದಂತೆ ಪರಿಸರ ತಜ್ಞರು ಸಾರ್ವಜನಿಕರ ಗಮನ ಸೆಳೆದರು. ವರ್ತುಲ ರಸ್ತೆಯ ದಿಕ್ಕನ್ನು ಬದಲಿಸಲಾಯಿತು. ಮುಡಾಕ್ಕೂ ಹೆಚ್ಚು ನಿವೇಶನಗಳು ಸಿಕ್ಕವು. ಹೀಗಾಗಿ ಕೆರೆ ಉಳಿಯಿತು’ ಎಂದು ಸ್ಮರಿಸಿದರು.

1828ರಲ್ಲಿ ನಿರ್ಮಾಣ ವಿಸ್ತಾರವಾದ ಕೆರೆ ಒಡಲು ಮೀಸಲು ಅರಣ್ಯ

‘ಲಿಂಗಾಂಬುಧಿ ಅರಣ್ಯ ಸಮಿತಿ ರದ್ದು’ ‘ಲಿಂಗಾಂಬುಧಿ ಅರಣ್ಯ ಸಮಿತಿ ಇತ್ತು. ಅದರಲ್ಲಿ ಸಾರ್ವಜನಿಕರೂ ಇದ್ದರು. ಅದನ್ನು ಅರಣ್ಯ ಇಲಾಖೆಯವರು ಮುಚ್ಚಿದ್ದಾರೆ. ಅದು ಇದ್ದಿದ್ದರೆ ಯಾವುದೇ ಕಾಮಗಾರಿ ನಡೆದರೂ ವೈಜ್ಞಾನಿಕವಾಗಿ ಆಗುತ್ತಿತ್ತು’ ಎಂದು ಯು.ಎನ್.ರವಿಕುಮಾರ್ ಹೇಳಿದರು. ‘40 ಅಡಿ ಅಗಲದ ಕೋಡಿ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ರಾಜಕಾಲುವೆಗಳಿಗೆ ಕಟ್ಟಡ ತ್ಯಾಜ್ಯ ಸೇರುತ್ತಿದೆ. ಕೆಳಭಾಗದಲ್ಲಿ ಬಡಾವಣೆಗಳು ಎದ್ದಿದ್ದು ಅಲ್ಲಿ ಪ್ರವಾಹವಾಗುತ್ತಿದೆ. ಜೌಗು ಕೆರೆಯ ರಾಜಕಾಲುವೆ ಉಳಿಸಬೇಕು. ಅಲ್ಲಿ ಕಟ್ಟಡ ತ್ಯಾಜ್ಯ ಸುರಿಯಲಾಗುತ್ತಿದೆ. ಕೆರೆ ಪಕ್ಕದಲ್ಲಿನ ತೋಟಗಳಲ್ಲಿ ಕೀಟನಾಶಕಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದು ಕೆರೆಯ ಒಡಲಿಗೆ ರಾಸಾಯನಿಕ ಸೇರುತ್ತಿದೆ. ಅದೂ ತಪ್ಪಬೇಕು’ ಎಂದರು.

ಸಸ್ಯೋದ್ಯಾನ ಆಕರ್ಷಣೆ ಕೆರೆಯ ಆವರಣದಲ್ಲಿ ಸಸ್ಯೋದ್ಯಾನವನ್ನು ₹ 5.6 ಕೋಟಿ ವೆಚ್ಚದಲ್ಲಿ ತೋಟಗಾರಿಕಾ ಇಲಾಖೆ ಅಭಿವೃದ್ಧಿ ಪಡಿಸಿದ್ದು 2023ರ ಅ.25ರಂದು ಉದ್ಘಾಟನೆಯಾಗಿದೆ. ವೈವಿಧ್ಯಮಯ ಗುಲಾಬಿ ತಾಕುಗಳು ಬಿದಿರಿನ ಮೆಳೆಗಳು ಔಷಧೀಯ ಸಸ್ಯಗಳು ಹಣ್ಣಿನ ಮರಗಳು ಹೂಗಳು ಈ ಅಪರೂಪದ ಸಸ್ಯೋದ್ಯಾನದ ಒಡಲಿನಲ್ಲಿ ತುಂಬಿಕೊಂಡಿವೆ. ಬೆಂಗಳೂರಿನ ಲಾಲ್ಬಾಗ್ ನಂತರ ಇರುವ ರಾಜ್ಯದ ಎರಡನೇ ಸಸ್ಯೋದ್ಯಾನವಿದು. ಚಿಣ್ಣರು ಹಿರಿಯರಿಗೆ ಚೇತೋಹಾರಿ ಅನುಭವ ನೀಡುವ ಹೂಗಳ ಲೋಕ ಚಿಟ್ಟೆ ಲೋಕ ‘ಟೊಪಿಯರಿ’ ಆಕೃತಿಗಳು ಇಲ್ಲಿ ಆಕರ್ಷಕವಾಗಿ ಮೈದೆರೆದಿವೆ. 15 ಎಕರೆಯಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಉದ್ಯಾನವು ಅಳಿವಿನಂಚಿನ 350ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿಗೆ ರಕ್ಷಾ ಕವಚವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.