ಮೈಸೂರು: ‘ಮಹಿಷ ದಸರಾ ಆಚರಣೆ ಸಮಿತಿಯು ‘ಮಹಿಷ ಮಂಡಲದ ಆದಿದೊರೆ ಮಹಿಷಾಸುರ; ಚಾರಿತ್ರಿಕ ನೋಟ’ ಕುರಿತು ಸೆಪ್ಟೆಂಬರ್ 10ರಂದು ನಗರದಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಏರ್ಪಡಿಸಿದೆ’ ಎಂದು ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಗರದ ಲಲಿತ ಕಲಾ ಕಾಲೇಜು ಆವರಣದಲ್ಲಿ ಚಿಂತಕ ಪ್ರೊ.ಮಹೇಶ್‌ಚಂದ್ರ ಗುರು ಅಧ್ಯಕ್ಷತೆ ಹಾಗೂ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲೇಖಕಿ ಬಿ.ಟಿ.ಲಲಿತಾ ನಾಯಕ್ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ’ ಎಂದು ಸಮಿತಿ ಅಧ್ಯಕ್ಷ ಪುರುಷೋತ್ತಮ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಪ್ರೊ.ಟಿ.ಎಂ.ಮಹೇಶ್ ಅಧ್ಯಕ್ಷತೆಗಳಲ್ಲಿ ಗೋಷ್ಠಿಗಳು ನಡೆಯಲಿದ್ದು, ರಾಜ್ಯದ ಹಲವು ಪ್ರಮುಖ ಚಿಂತಕರು, ವಿಚಾರವಾದಿಗಳು ಭಾಗವಹಿಸಲಿದ್ದಾರೆ. ಮಹಿಷನ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕುವ, ನೈಜ ಇತಿಹಾಸ ತಿಳಿಸುವ ಕೆಲಸವಾಗಲಿದೆ. ಅ.13ರ ಮಹಿಷ ದಸರಾಕ್ಕೂ ಮುನ್ನ ಈ ಬಗ್ಗೆ ಸಂವಾದ ಆಯೋಜಿಸಲಿದ್ದೇವೆ’ ಎಂದರು.

‘ಮಹಿಷ ದಸರಾಕ್ಕೆ 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಲಿದ್ದು, ಪ್ರತಿಮೆ ಬಳಿ ಸ್ಥಳದ ಕೊರತೆಯಿರುವುದರಿಂದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಮಹಿಷ ಪ್ರತಿಮೆಗೆ ನೂರಾರು ಮಂದಿ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಲಾಗುವುದು. ಆಚರಣೆಗೆ ಅನುಮತಿಯ ಅವಶ್ಯಕತೆಯಿಲ್ಲ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲೇಖಕರಾದ ಕೃಷ್ಣಮೂರ್ತಿ ಚಮರಂ, ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ದಲಿತ ವೆಲ್‌ಫೆರ್ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಂದಾನಿ, ಪ್ರಮುಖರಾದ ವಿಷಕಂಠ, ಶಿವಣ್ಣ, ನಂಜುಂಡಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.