ಶ್ರೀಕಂಠೇಶ್ವರ, ಗಣಪತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ, ಪಾರ್ವತಮ್ಮ, ನಾರಾಯಣಸ್ವಾಮಿ ಗುಡಿಗಳಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿ ವರ್ಷವೂ ಚಾಮುಂಡೇಶ್ವರಿ ಹಾಗೂ ಶ್ರೀಕಂಠೇಶ್ವರ ದೇವಾಲಯಗಳಿಗೆ ಕುಟುಂಬ ಸಮೇತ ಭೇಟಿ ನೀಡಿ, ಪೂಜೆ ಸಲ್ಲಿಸುವುದು ನಮ್ಮ ಕುಟುಂಬದ ವಾಡಿಕೆಯಾಗಿದೆ. ಅದರಂತೆ ಮನೆದೇವರಾದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದೇನೆ’ ಎಂದು ಹೇಳಿದರು.