ಮೈಸೂರು: ‘ಕೇವಲ ಮಾತಿನಲ್ಲಿ ಜಾತ್ಯತೀತ ಎನ್ನುವವರಿಗಿಂತ ಕೃತಿಯಲ್ಲಿ ಆ ಗುಣವನ್ನು ಪಾಲಿಸುವುದು ಉತ್ತಮ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಇಲ್ಲಿನ ಕಾಂತರಾಜ ಅರಸ್ ರಸ್ತೆಯ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ನಗರ ಸಮಿತಿ ಮಾಜಿ ಅಧ್ಯಕ್ಷ ಟಿ.ಎಸ್.ರವಿಶಂಕರ್ ಸ್ಮರಣೆಯ ‘ನೆನಪಿನಂಗಳದಲ್ಲಿ ಟಿ.ಎಸ್.ರವಿಶಂಕರ್’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದ ಸ್ವಾತಂತ್ರ್ಯ ಹೋರಾಟ ಕೂಡ ಸಮುದಾಯಗಳ ನಡುವೆ ಕೋಮುಸೌಹಾರ್ದ ಬಿತ್ತಲು ಪ್ರಯತ್ನಿಸಿದೆ. ಜಾತಿ ತಾರತಮ್ಯ ವಿರೋಧಿಸಿದೆ. ಟಿ.ಎಸ್.ರವಿಶಂಕರ್ ಹಾಗೂ ಅವರ ಕುಟುಂಬ ಇದೇ ಆಶಯವನ್ನು ಅನುಸರಿಸಿದ್ದಾರೆ. ಶಾಸಕ ತನ್ವೀರ್ ಸೇಠ್ ಕುಟುಂಬದೊಂದಿಗೆ ಅವರೆಲ್ಲರೂ ಸ್ನೇಹ, ಪ್ರೀತಿಯಿಂದ ಬೆರೆತಿರುವುದೇ ಇದಕ್ಕೆ ಸಾಕ್ಷಿ’ ಎಂದರು.

ಸಾಮಾಜಿಕ ನ್ಯಾಯದಲ್ಲಿ ನಂಬಿಕೆ: ‘ಬಾಬಾಸಾಹೇಬ್ ಅಂಬೇಡ್ಕರ್ ಮಾರ್ಗದಲ್ಲಿ ಸಾಗುತ್ತಿರುವ ರವಿಶಂಕರ್ ಕುಟುಂಬ ‘ತಾನೇ ಶ್ರೇಷ್ಠ ಎಂಬ ಬ್ರಾಹ್ಮಣಿಸಂ’ ಅನ್ನು ಎಂದೂ ಅನುಸರಿಸಿಲ್ಲ. ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವುದೇ ಪ್ರೀತಿ ಎಂಬುದನ್ನು ಅರಿತಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ತಗಡೂರಿನ ಈ ಕುಟುಂಬ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿದೆ. ಅವರೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ದುಡಿದು, ನೈತಿಕ ಚಳವಳಿಯನ್ನು ಮುನ್ನಡೆಸಿ ಚರಿತ್ರೆ ನಿರ್ಮಿಸಿದ್ದಾರೆ. ನಮ್ಮೆಲ್ಲರಿಗೂ ಉದಾಹರಣೆಯೂ ಆಗಿದ್ದಾರೆ’ ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ರವಿಶಂಕರ್ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಗುಣ ಹೊಂದಿದ್ದರು. ಸ್ಕೌಟ್ಸ್ ಚಟುವಟಿಕೆ, ರಾಜಕಾರಣ, ಸಮಾಜಸೇವೆ ಮೂಲಕ ಎಲ್ಲರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರು’ ಎಂದರು.

‘ಜೀವನದಲ್ಲಿ ಭೌತಿಕ ಹಣ, ಸಂಪನ್ಮೂಲ ಸಂಪಾದನೆಗಿಂತ ಜನರ ಪ್ರೀತಿ ಸಂಪಾದನೆಯೇ ಪ್ರಮುಖ. ಪ್ರತಿಯೊಬ್ಬರ ಕಷ್ಟ, ಸುಖಗಳಿಗೆ ಸ್ಪಂದಿಸುವುದೇ ಮನುಷ್ಯನ ಆದ್ಯ ಕೆಲಸ’ ಎಂದು ಹೇಳಿದರು.

ಟಿ.ಎಸ್.ರವಿಶಂಕರ್ ಸ್ನೇಹ ಬಳಗದಿಂದ, ನಾ.ನಾಗಚಂದ್ರ ಸಂಪಾದಕತ್ವದ ‘ಟಿ.ಎಸ್.ರವಿಶಂಕರ್ ನುಡಿ ನೆನಪು’ ಪುಸ್ತಕ ಬಿಡುಗಡೆ ಮಾಡಲಾಯಿತು. ಶ್ರೀಶಾರದ ಗೃಹ ನಿರ್ಮಾಣ ಸಹಕಾರ ಸಂಘದ ‘ಟಿ.ಎಸ್.ರವಿಶಂಕರ್ ಬಡಾವಣೆ’ ನಾಮಫಲಕ ಅನಾವರಣಗೊಳಿಸಲಾಯಿತು.

ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಸದಸ್ಯ ಎಚ್.ವಿ.ರಾಜೀವ್, ಕಾಂಗ್ರೆಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ಕುಮಾರ್, ಮಂಜುನಾಥ್, ಮೈಸೂರು ಸ್ಕೌಟ್ಸ್ನ ಅಮರನಾಥ್, ರವಿಶಂಕರ್ ಕುಟುಂಬದವರಾದ ಟಿ.ಎಸ್.ಅನಿಲ್ ಕುಮಾರ್, ಡಾ.ಸುಜಾತ ಎಸ್.ರಾವ್, ವಿಜಯಲಕ್ಷ್ಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.