ಮಂಗಳವಾರ, 17 ಮಾರ್ಚ್ 2026
×
ADVERTISEMENT

ಬಳಸದಿದ್ದ ‘ಭವನ’ವೀಗ ‘ಅರಿವು’ ಕೇಂದ್ರ: ಅಂಬೇಡ್ಕರ್‌ ಹೆಸರಲ್ಲಿ ಮೈದಳೆದ ಗ್ರಂಥಾಲಯ

Published : 19 ಫೆಬ್ರುವರಿ 2026, 4:01 IST
Last Updated : 19 ಫೆಬ್ರುವರಿ 2026, 4:01 IST
ADVERTISEMENT
ಫಾಲೋ ಮಾಡಿ
Comments
ಭವನವೀಗ ‘ಡಾ.ಬಿ.ಆರ್‌.ಅಂಬೇಡ್ಕರ್‌ ಗ್ರಾಮ ಪಂಚಾಯಿತಿ ಅರಿವು ಕೇಂದ್ರವಾಗಿ ರೂಪಗೊಂಡಿರುವುದು
ಭವನವೀಗ ‘ಡಾ.ಬಿ.ಆರ್‌.ಅಂಬೇಡ್ಕರ್‌ ಗ್ರಾಮ ಪಂಚಾಯಿತಿ ಅರಿವು ಕೇಂದ್ರವಾಗಿ ರೂಪಗೊಂಡಿರುವುದು
ಅರಿವು ಕೇಂದ್ರದ ಒಳನೋಟ
ಅರಿವು ಕೇಂದ್ರದ ಒಳನೋಟ
ಡಾ.ಬಿ.ಆರ್. ಅಂಬೇಡ್ಕರ್‌ ಅರಿವು ಕೇಂದ್ರ ಶೀಘ್ರವೇ ಉದ್ಘಾಟನೆಗೊಳ್ಳಲಿದೆ. ಪಂಚಾಯಿತಿಯ ಎಲ್ಲ ಸದಸ್ಯರೂ ಮುಕ್ತ ಮನಸ್ಸಿನಿಂದ ಸಹಕರಿಸಿದ್ದರಿಂದ ಈ ಕೆಲಸ ಸಾಧ್ಯವಾಯಿತು
ಕೆ.ಎಸ್. ಗಣೇಶ್ ಪಿಡಿಒ ಹಾರೋಹಳ್ಳಿ ಗ್ರಾಮ ಪಂಚಾಯಿತಿ ಜಯಪುರ ಹೋಬಳಿ
ಬಯಲಲ್ಲಿ ಮೂರು ‘ಚಾವಡಿ’
ಬಯಲಲ್ಲಿ ಮೂರು ‘ಚಾವಡಿ’ ಕಾಂಪೌಂಡ್‌ ನಿರ್ಮಿಸಲಾಗಿದೆ. ಅಲ್ಲಿ ಬಯಲು ಗ್ರಂಥಾಲಯವೂ ಇದ್ದು ಮೂರು ಓದುಗರ ಚಾವಡಿಗಳನ್ನು ಕಟ್ಟಲಾಗಿದೆ. ಯಾರು ಬೇಕಾದರೂ ಅಲ್ಲಿ ಕುಳಿತು ಓದಬಹುದು. ಪುರುಷರು ಮಹಿಳೆಯರು ಹಾಗೂ ಅಂಗವಿಕಲರಿಗೆ ಪ್ರತ್ಯೇಕವಾಗಿ ರ್‍ಯಾಂಪ್‌ ಸಹಿತ ಶೌಚಾಲಯದ ವ್ಯವಸ್ಥೆ ವಿಶೇಷ. ಬಯಲು ಗ್ರಂಥಾಲಯಕ್ಕೆ ಹಾರೋಹಳ್ಳಿಯವರೇ ಆದ ‘ಅನ್ನಪೂರ್ಣ’ ಸೇರಿದಂತೆ ಅಧಿಕ ಇಳುವರಿ ನೀಡುವ ಹಲವು ರಾಗಿ ತಳಿ ಅಭಿವೃದ್ಧಿಪಡಿಸಿದ ಕೃಷಿ ವಿಜ್ಞಾನಿ ‘ರಾಗಿ ಲಕ್ಷ್ಮಣಯ್ಯ’ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಲಾಗಿದೆ. ಆವರಣದಲ್ಲಿ ಲಾನ್‌ ವ್ಯವಸ್ಥೆ ಇದೆ. ಓದಿಕೊಳ್ಳುವವರಿಗೆ ಪ್ರಶಾಂತ ವಾತಾವರಣ ಕಲ್ಪಿಸಲಾಗಿದೆ. ಕಥೆ ಕವನ ಕಾದಂಬರಿ ಸಂವಿಧಾನಕ್ಕೆ ಸಂಬಂಧಿಸಿದವು ಆತ್ಮಚರಿತ್ರೆ ಮೊದಲಾದ ಪುಸ್ತಕಗಳನ್ನೂ ಒಪ್ಪವಾಗಿ ಜೋಡಿಸಲಾಗಿದೆ. 
ತರಬೇತಿ ನೀಡಲೂಬಹುದು...
ತರಬೇತಿ ಕೇಂದ್ರವನ್ನಾಗಿಯೂ ಬಳಸಿಕೊಳ್ಳಲು ಪ್ರೊಜೆಕ್ಟರ್ ಹಾಕಲಾಗಿದೆ. ಹೊರಗಿನ ಶಬ್ದ ಬಾರದಿರಲೆಂದು ಮರದ ಬಾಗಿಲಿನೊಂದಿಗೆ ಗಾಜಿನಡೋರ್‌ ಕರ್ಟನ್‌ಗಳು ಮ್ಯಾಟ್ ವಾಲ್ ಪ್ಯಾನಲಿಂಗ್‌ ಮಾಡಿರುವುದು ವಿಶೇಷ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT