ತಿ.ನರಸೀಪುರ: ಗ್ರಾಮೀಣ ಭಾಗದ ಜನರ ಬದುಕಿನ ಉದ್ಯೋಗ ಭದ್ರತೆಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ‘ವಿಬಿ ಜಿ ರಾಮ್ ಜೀ’ ಎಂದು ಬದಲಾಯಿಸಿ ಯೋಜನೆಯನ್ನು ಮುಗಿಸುವ ಹುನ್ನಾರ ಕೈಬಿಟ್ಟು ಮತ್ತೆ ಯೋಜನೆ ಜಾರಿಗೆ ತರುವಂತೆ ಸಂಸದ ಸುನಿಲ್ ಬೋಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಡಗೂಡಿ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧೀಜಿ ಕಂಡಿದ್ದ ಗ್ರಾಮಸ್ವರಾಜ್ಯದ ಕನಸನ್ನು ನನಸು ಮಾಡಲು ಅಂದು ಮನಮೋಹನ್ ಸಿಂಗ್ ಅವರು ಮಹಾತ್ಮ ಗಾಂಧಿಯವರ ಹೆಸರಿಟ್ಟು ಪ್ರಾರಂಭಿಸಿದ್ದರು. ಈ ಯೋಜನೆಯಿಂದ ದೇಶದಾದ್ಯಂತ ಗ್ರಾಮೀಣ ಭಾಗದ ಜನಸಮುದಾಯಕ್ಕೆ ಉದ್ಯೋಗ ಖಾತ್ರಿಯಾಗಿತ್ತು. ಆದರೆ ಕೇಂದ್ರ ಸರ್ಕಾರ ವಿಬಿ ಜಿರಾಮ್ ಜಿ ಎಂದು ಹೆಸರು ಬದಲಾಯಿಸಿರುವುದು ಏಕೆ? ಯೋಜನೆಯನ್ನು ಬದಲಾಯಿಸುವ ಉದ್ದೇಶವಾದರೂ ಏನು? ಇದು ಆರ್ಎಸ್ಎಸ್ ಪರ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದರು.

ಕೇಂದ್ರ ಸರ್ಕಾರ ಮಾಡಿರುವ ರಾಮ್ ಜಿ ಯೋಜನೆಯಲ್ಲಿ ಶೇ 60ರಷ್ಟು ಕೇಂದ್ರ ಹಾಗೂ ಶೇ 40ರಷ್ಟನ್ನು ರಾಜ್ಯ ಸರ್ಕಾರ ಅನುದಾನ ಭರಿಸಬೇಕಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ₹2283 ಕೋಟಿ ಹೊರೆಯಾಗಲಿದೆ. ಜತೆಗೆ ಸರ್ಕಾರ ಸೂಚಿಸುವ ನಿರ್ದಿಷ್ಟ ಕಾಮಗಾರಿಗಳನ್ನು ಮಾತ್ರ ಮಾಡಬೇಕು ಇದರಿಂದ ಅಭಿವೃದ್ಧಿಗೂ ಹಿನ್ನಡೆಯಾಗಲಿದೆ’ ಎಂದು ಆರೋಪಿಸಿದರು

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯಕುಮಾರ್, ‘ಕೇಂದ್ರ ಸರ್ಕಾರ ಯೋಜನೆಯನ್ನು ಬದಲಾಯಿಸಿರುವ ಕುರಿತು ಈಗಾಗಲೇ ನಾವು ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಿದ್ದೇವೆ. ಸಂಸತ್ತಿನಲ್ಲೂ ರಾಹುಲ್ ಗಾಂಧಿಯವರ ಜೊತೆ ಸಂಸದ ಸುನಿಲ್ ಬೋಸ್ ಹೋರಾಟ ಮಾಡಿದ್ದಾರೆ. ಬಡಜನರ ಆರ್ಥಿಕ ಭದ್ರತೆಗೆ ಕನಿಷ್ಠ ಕೂಲಿ ದೊರಕಿ ಬದುಕು ನಡೆಸಲು ಮನರೇಗಾ ಜಾರಿಗೊಳಿಸಿತ್ತು’ ಎಂದರು.

ಈಗಿನ ಬಿಜೆಪಿ ಕೇಂದ್ರ ಸರ್ಕಾರ ಯೋಜನೆಯನ್ನು ಬೇರೆ ಹೆಸರಿನಲ್ಲಿ ಬದಲಾವಣೆ ಮಾಡಿದೆ. ಮನ್ರೇಗಾ ಯೋಜನೆಯ ಮರು ಜಾರಿಗಾಗಿ ಒತ್ತಾಯಿಸಿ ಇಂದು ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್ ಬೋಸ್ ಅವರ ನೇತೃತ್ವದಲ್ಲಿ ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ಬನ್ನೂರು ಕ್ಷೇತ್ರ ಅಧ್ಯಕ್ಷ ಚನ್ನಕೇಶವ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಎನ್. ಸಿದ್ದಾರ್ಥ, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು, ಎಚ್. ಮಂಜುನಾಥ್, ಮಧುಕುಮಾರ್, ಹೆಮ್ಮಿಗೆ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ವಿ. ಶೇಷಾದ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ದೊಡ್ಡಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಎಚ್.ಎನ್. ಉಮೇಶ್, ಉಕ್ಕಲಗೆರೆ ಬಸವಣ್ಣ, ಕೊಳತ್ತೂರು ಕುಮಾರ್, ಸಿದ್ದನಹುಂಡಿ ರಂಗಸ್ವಾಮಿ, ಚಿದರವಳ್ಳಿ ಚಂದ್ರಶೇಖರ್, ನವಿದುಲ್ಲ, ವಾಟಾಳು ನಾಗೇಶ್, ಮಹದೇವಸ್ವಾಮಿ, ಆದಿಬೆಟ್ಟಳ್ಳಿ ಎ.ಬಿ. ಮಂಜುನಾಥ್, ಯಾಚೆನಹಳ್ಳಿ ಅಶೋಕ್, ಕನ್ನಹಳ್ಳಿ ಲಕ್ಷ್ಮಣ್, ಕೆ.ಎಂ. ಶಿವಕುಮಾರ್, ಲತಾ ಜಗದೀಶ್, ತಲಕಾಡು ನರಸಿಂಹ ಮಾದನಾಯಕ, ಶಿವಶಂಕರ್, ಹೆಮ್ಮಿಗೆ ಸೋಮಣ್ಣ, ಗದ್ದೆಮೊಳೆ ಸಿದ್ದರಾಜು, ಬಸವರಾಜು, ರಾಜೇಶ್, ಕೊತ್ತೆಗಾಲ ಬಸವರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.