ಜಾನುವಾರುಗಳಿಗೆ ವಿಮೆ:
‘ಜಾನುವಾರುಗಳಿಗೂ ವಿಮೆ ಕಲ್ಪಿಸುವ ಯೋಜನೆಯ ಕುರಿತು ಪಶು ಸಂಗೋಪನೆ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುವೆ’ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಇಲ್ಲಿನ ಜೆ.ಕೆ. ಮೈದಾನದಲ್ಲಿ ಶನಿವಾರ ರೈತ ದಸರಾ ಉದ್ಘಾಟಿಸಿ ಅವರು ಮಾತನಾಡಿ, ‘ಕೆಲವು ಹಳ್ಳಿಕಾರ್ ತಳಿಯ ಹಸುಗಳು ₹8–10 ಲಕ್ಷ ಮೌಲ್ಯ ಹೊಂದಿದ್ದು, ಅವು ಸತ್ತಾಗ ರೈತರಿಗೆ ಭಾರಿ ನಷ್ಟವಾಗುತ್ತದೆ. ಹೀಗಾಗಿ ಅವುಗಳಿಗೂ ವಿಮೆಯ ಅಗತ್ಯವಿದೆ’ ಎಂದರು.