ಸದ್ಯ ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಕ್ಯಾಂಪಸ್ ಅಭಿವೃದ್ಧಿಯನ್ನೂ ಆಂತರಿಕ ಸಂಪನ್ಮೂಲದಿಂದ ಕೈಗೊಳ್ಳಲಾಗಿತ್ತು. ಹೊಸ ಕ್ಯಾಂಪಸ್‌ನಿಂದ ಸ್ವಂತ ನೆಲೆ ದೊರೆತಂತಾಗಿದೆ
ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ,ಕುಲಪತಿ ಸಂಗೀತ ವಿಶ್ವವಿದ್ಯಾಲಯ
ಈಗಿರುವ ಕ್ಯಾಂಪಸ್‌ನಲ್ಲಿ...
‘ಹಾಲಿ ಇರುವ ಕಟ್ಟಡದಲ್ಲಿ ಸರ್ಟಿಫಿಕೆಟ್ ಕೋರ್ಸ್‌ಗಳು ಮುಂದುವರಿ ಯಲಿವೆ. ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿದ್ದ ಸಂಗೀತ ತಾಳವಾದ್ಯ ಹಾಗೂ ನೃತ್ಯಕ್ಕೆ ಸಂಬಂಧಿಸಿದ ಜೂನಿಯರ್ ಸೀನಿಯರ್ ವಿದ್ವತ್ ಪೂರ್ವ ಹಾಗೂ ವಿದ್ವತ್ ಪರೀಕ್ಷೆಗಳ ನಿರ್ವಹಣೆ ಹೊಣೆಯನ್ನು ವಿಶ್ವವಿದ್ಯಾಲಯಕ್ಕೇ ವಹಿಸಲಾಗಿದೆ. ರಾಜ್ಯಮಟ್ಟದ ಈ ವಿಶೇಷ ಪರೀಕ್ಷೆಯನ್ನು ಪ್ರತಿ ವರ್ಷ ನಡೆಸಲು ಲಕ್ಷ್ಮೀಪುರಂ ಕ್ಯಾಂಪಸ್ ಬಳಸಲಾಗುವುದು’ ಎಂದು ಪ್ರೊ.ನಾಗೇಶ್ ತಿಳಿಸಿದರು. ವಿಶ್ವವಿದ್ಯಾಲಯ ಸದ್ಯ ಗಾಯನ ಸಂಗೀತ ವಾದ್ಯಗಳು ನೃತ್ಯ ಹಾಗೂ ರಂಗಭೂಮಿ ಕಲಾ ವಿಭಾಗದಲ್ಲಿ ಬಿಪಿಎ ಎಂಪಿಎ ಡಿ.ಲಿಟ್ ಸರ್ಟಿಫಿಕೆಟ್ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದೆ. ಧಾರವಾಡ ಜಿಲ್ಲೆಯ ಗಂಗೂಬಾಯಿ ಹಾನಗಲ್ ಗುರುಕುಲ ಕೇಂದ್ರವನ್ನೂ ವಿಶ್ವವಿದ್ಯಾಲಯವೇ ನಡೆಸುತ್ತಿದೆ.