ಮೈಸೂರು: ‘ನಗರದಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಹಗುರವಾಗಿ ಪರಿಗಣಿಸದೇ, ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್.ರಘು ಕೌಟಿಲ್ಯ ಒತ್ತಾಯಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಗರದಲ್ಲಿ ಆತಂಕದ ಛಾಯೆ ಆವರಿಸಿದೆ. ಅಂಬಾವಿಲಾಸ ಅರಮನೆಯ ಉತ್ತರ ದಿಕ್ಕಿನಲ್ಲಿ ಮೇಲಿಂದ ಮೇಲೆ ಅಪರಾಧ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಕೊಲೆ, ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣ ನಡೆದಿತ್ತು. ಈಗ, ಬಲೂನ್ಗೆ ಹೀಲಿಯಂ ಅನಿಲ ತುಂಬುವ ಸಿಲಿಂಡರ್ ಸ್ಫೋಟದಿಂದ ಮೂರು ಜೀವಗಳು ಬಲಿಯಾಗಿವೆ. ಕೆಲವರು ಗಾಯಗೊಂಡಿದ್ದಾರೆ. ಇಲ್ಲಿನ ಬೆಳವಣಿಗೆಗಳು ಜನರನ್ನು ಆತಂಕಕ್ಕೆ ದೂಡಿವೆ’ ಎಂದು ಹೇಳಿದರು.

‘ಮೈಸೂರಿನ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಸರ್ಕಾರ ಅತ್ಯಂತ ಹಗುರವಾಗಿ ನಡೆದುಕೊಳ್ಳುತ್ತಿದೆ. ಸ್ಫೋಟ ಪ್ರಕರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತೇಪೆ ಹಚ್ಚುವ ಹೇಳಿಕೆ ನೀಡಿದ್ದಾರೆ. ಆಕಸ್ಮಿಕವಾಗಿ ನಡೆದಿದೆ, ದುರಾದೃಷ್ಟ ಎಂಬ ಮಾತುಗಳ ಮೂಲಕ ಘಟನೆಯ ಗಾಂಭೀರ್ಯತೆಯನ್ನು ಕಳೆದಿದ್ದಾರೆ’ ಎಂದು ಆರೋಪಿಸಿದರು.

‘ಸ್ಫೋಟದ ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಬೇಕಿತ್ತು. ಬಲೂನು ಮಾರುತ್ತಿದ್ದವ ಎಲ್ಲಿಂದ ಬಂದ, ಲಾಡ್ಜ್ನಲ್ಲಿ ಉಳಿಯುತ್ತಾರೆಂದರೆ ಅವರ ಹಿನ್ನೆಲೆ ಏನು? ಯಾವ್ಯಾವ ರಾಜ್ಯದವರು ಅರಮನೆ ಸುತ್ತ ವ್ಯಾಪಾರ ಮಡುತ್ತಿದ್ದಾರೆ? ಇವರ ಮಾಹಿತಿ ಸರ್ಕಾರ, ಪೊಲೀಸ್ ಇಲಾಖೆ ಅಥವಾ ಗುಪ್ತಚರ ಇಲಾಖೆಗೆ ಇದೆಯೇ? ಅನುಮತಿ ಕೊಟ್ಟವರಾರು?’ ಎಂದು ಕೇಳಿದರು.

‘ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕ ಹೊರರಾಜ್ಯದವರೇ ಆಕ್ರಮಿಸಿಕೊಂಡಿದ್ದಾರೆ. ಸ್ಫೋಟ ಪ್ರಕರಣವನ್ನು ಅರಮನೆಗೆ ಒದಗಿಬಂದಿರುವ ಗಂಡಾಂತರದ ಮುನ್ಸೂಚನೆ ಎಂದು ಸರ್ಕಾರ ಪರಿಗಣಿಸದಿದ್ದರೆ ಮುಂದಾಗುವ ದೊಡ್ಡ ಅನಾಹುತಗಳಿಗೆ ನೇರ ಹೊಣೆಯಾಗಲಿದೆ. ಬದ್ಧತೆ ಇದ್ದರೆ ಪ್ರಕರಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು’ ಎಂದು ಕೋರಿದರು.

‘ಅರಮನೆಗೆ ಈಗ ಸುರಕ್ಷತೆ ಇಲ್ಲವಾಗಿದೆ. ಯಾರು ಬೇಕಾದರೂ ಬರಬಹುದು ಎಂಬಂತಾಗಿದೆ. ವಿಶ್ವವಿಖ್ಯಾತವಾದ ಈ ಪ್ರವಾಸಿ ತಾಣಕ್ಕೆ ಒದಗಿಸಿರುವ ರಕ್ಷಣೆ ಯಾವುದಕ್ಕೂ ಸಾಲದು. ಕೂಡಲೇ ಕೇಂದ್ರೀಯ ಕೈಗಾರಿಕಾ ಪಡೆಯನ್ನು ನಿಯೋಜಿಸಬೇಕು. ಮೃತಪಟ್ಟವರ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಈಗ ನೆಪ ಮಾತ್ರಕ್ಕಷ್ಟೆ ಭದ್ರತೆ ಇದೆ. ಅರಮನೆಗೆ ದುರಂತವಾದರೆ ಸರ್ಕಾರದಿಂದ ಬೆಲೆ ಕಟ್ಟಿಕೊಡಲಾದೀತೇ?’ ಎಂದು ಕೇಳಿದರು.

‘ಸರ್ಕಾರವು ಇದನ್ನು ಆದಾಯದ ಮೂಲವೆಂದು ಪರಿಗಣಿಸಿದೆಯೇ ಹೊರತು ಪಾರಂಪರಿಕ ಆಸ್ತಿ ಎಂದು ಪರಿಗಣಿಸಿಲ್ಲ’ ಎಂದು ದೂರಿದರು. ‘ವಿದೇಶಗಳಲ್ಲಿರುವಂತೆ, ಅರಮನೆಗೆ ಬರುವ ಪ್ರವಾಸಿಗರು ಹಾಗೂ ಸಂದರ್ಶಕರ ಮೇಲೆ ನಿಯಂತ್ರಣ ಹೇರಬೇಕು’ ಎಂದರು.

‘ಮುಖ್ಯಮಂತ್ರಿಗೆ ಅರಮನೆ, ಮಹಾರಾಜರೆಂದರೆ ಹಿಂದಿನಿಂದಲೂ ಉಡಾಫೆಯೇ. ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಬಿಡಿಗಾಸನ್ನೂ ಕೊಟ್ಟಿಲ್ಲ. ಅವು ಅನಾಥಪ್ರಜ್ಞೆಯಲ್ಲಿವೆ’ ಎಂದು ಆರೋಪಿಸಿದರು.

‘ಮುಂದಾದರೂ, ಅರಮನೆಯ ಸುರಕ್ಷತೆಯ ದೃಷ್ಟಿಯಿಂದ ದಿನಕ್ಕೆ ಇಂತಿಷ್ಟೇ ಪ್ರವೇಶವೆಂದು ನಿರ್ಬಂಧಿಸಬೇಕು. ಸ್ಫೋಟ ಪ್ರಕರಣವನ್ನು ಮುಚ್ಚಿ ಹಾಕದೇ ವಿಸ್ತೃತ ತನಿಖೆ ನಡೆಸಬೇಕು. ಬೀದಿಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಜಾಗ ಕೊಟ್ಟು, ಗುರುತಿನ ಚೀಟಿ ನೀಡಿ ವ್ಯವಸ್ಥಿತಗೊಳಿಸಬೇಕು. ಈ ಮೂಲಕ ಪಾದಚಾರಿಗಳ ಹಕ್ಕು ರಕ್ಷಿಸಬೇಕು’ ಎಂದು ಒತ್ತಾಯಿಸಿದರು.

‘ಬೀದಿಬದಿಯಲ್ಲಿ ಸುರಕ್ಷತೆ ಇಲ್ಲದ ಸಾಧನಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವುದನ್ನು ನಿಯಂತ್ರಿಸಲು ನೀತಿ ರೂಪಿಸಬೇಕು. ಚಾಮುಂಡಿಬೆಟ್ಟದ ಸುತ್ತಲೂ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧ ಹೇರಬೇಕು. ಬೆಟ್ಟವನ್ನು ನೈಸರ್ಗಿಕವಾಗಿ ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ‘ಅಕ್ರಮಗಳು ನಡೆಯುತ್ತಿದ್ದರೂ ನಗರ ಪೊಲೀಸ್ ಆಯುಕ್ತರು ಕಣ್ಣು ಮುಚ್ಚಿ ಕೂರಬಾರದು. ಅರಮನೆ ಉಳಿಸಬೇಕು, ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಮೇಯರ್ ಶಿವಕುಮಾರ್, ವಕ್ತಾರ ಮಹೇಶ್ರಾಜೇ ಅರಸ್, ಎಸ್ಟಿ ಮೋರ್ಚಾ ಅಧ್ಯಕ್ಷ ರಾಮಕೃಷ್ಣ ಹಾಗೂ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಪಾಲ್ಗೊಂಡಿದ್ದರು

.ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ: ವರದಿಗೆ ಸೂಚನೆ.

.ಬಲೂನ್ಗೆ ಹೀಲಿಯಂ ತುಂಬುವಾಗ ಸಿಲಿಂಡರ್ ಸ್ಫೋಟ: ಗಾಯಾಳು ಮಹಿಳೆ ಸಾವು.

.ಮೈಸೂರಿನ ಅಂಬಾವಿಲಾಸ ಅರಮನೆ ಬಳಿ ಸಿಲಿಂಡರ್ ಸ್ಫೋಟ: ಒಬ್ಬ ಸಾವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.