ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara 2023 | ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಪ್ರವಾಸ 23ರಿಂದ

Published 21 ಅಕ್ಟೋಬರ್ 2023, 14:10 IST
Last Updated 21 ಅಕ್ಟೋಬರ್ 2023, 14:10 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅ.23ರಿಂದ ಅ.25ರವರೆಗೆ ಮೈಸೂರು ಪ್ರವಾಸ ಕೈಗೊಂಡಿದ್ದಾರೆ.

23ರಂದು ಮಧ್ಯಾಹ್ನ 12.30ಕ್ಕೆ ಆಗಮಿಸುವ ಅವರು, ಸಂಜೆ 4ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ದಸರಾ ಅಂಗವಾಗಿ ಆಯೋಜಿಸಿರುವ ವೈಮಾನಿಕ ಪ್ರದರ್ಶನ (ಏರ್‌ ಶೋ) ವೀಕ್ಷಿಸುವರು. ನಗರದಲ್ಲಿ ವಾಸ್ತವ್ಯ ಹೂಡುವರು.

24ರಂದು ಬೆಳಿಗ್ಗೆ 8.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿ, ಉಪಾಹಾರ ಸೇವಿಸುವರು. ಜಂಬೂಸವಾರಿ ಅಂಗವಾಗಿ ಮಧ್ಯಾಹ್ನ 1.46ಕ್ಕೆ ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜ ಪೂಜೆ ನೆರವೇರಿಸುವರು. ಸಂಜೆ 4.40ರಿಂದ 5ರವರೆಗೆ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಉದ್ಘಾಟಿಸುವರು. ಸಂಜೆ 7.30ಕ್ಕೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ರಾಜ್ಯಪಾಲರೊಂದಿಗೆ ಪಂಜಿನ ಕವಾಯತು ವೀಕ್ಷಿಸುವರು. ವಾಸ್ತವ್ಯ ಹೂಡುವರು.

ಅ.25ರಂದು ಮಧ್ಯಾಹ್ನ 12.30ಕ್ಕೆ ಲಿಂಗಾಂಬುಧಿ ಸಸ್ಯವಿಜ್ಞಾನ ತೋಟವನ್ನು ಉದ್ಘಾಟಿಸುವರು. ಮಧ್ಯಾಹ್ನ 1.30ಕ್ಕೆ ಕರ್ಜನ್ ಉದ್ಯಾನದಲ್ಲಿ ತೋಟಗಾರಿಕೆ ಪಿತಾಮಹ ಎಂ.ಎಚ್. ಮರಿಗೌಡ ಅವರ ಪ್ರತಿಮೆ ಅನಾವರಣಗೊಳಿಸುವರು. ಸಂಜೆ 4ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT