ಮೈಸೂರು: 2026– 27ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಿಸುವ ಸಲುವಾಗಿ ಉನ್ನತ ಶಿಕ್ಷಣ ಇಲಾಖೆಯಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ವತಿಯಿಂದ ‘ಪ್ರವೇಶಾತಿ ಅಭಿಯಾನ’ ಆರಂಭಿಸಲಾಯಿತು. ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ನಗರದ ವಿವಿಧ ಪದವಿ ಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಪ್ರವೇಶದ ಕುರಿತು ಮಾಹಿತಿ ನೀಡಿದರು.

ಮಹಾರಾಣಿ ಪಿಯು, ಚಾಮರಾಜ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಪಿಯು ಕಾಲೇಜು, ಡಿ.ದೇವರಾಜ ಅರಸು ಪಿಯು ಕಾಲೇಜು ಮತ್ತು ಪೀಪಲ್ಸ್ ಪಾರ್ಕ್ ಪಿಯು ಕಾಲೇಜುಗಳಿಗೆ ಭೇಟಿ ನೀಡಿದ ಪ್ರವೇಶಾತಿ ಸಮಿತಿಯ ಸದಸ್ಯರು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು ಮತ್ತು ಲಭ್ಯವಿರುವ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರದಿಂದ ಸಿಗುವ ವಿದ್ಯಾರ್ಥಿವೇತನ, ವಿದ್ಯಾರ್ಥಿನಿಲಯ ಮೊದಲಾದವುಗಳ ಕುರಿತು ತಿಳಿಸಿದರು.

ಸಮಿತಿಯ ಅಧ್ಯಕ್ಷ, ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹಿಮಾನ್ ಎಂ., ಸಂಚಾಲಕ ಕೆ.ಎಲ್. ರಮೇಶ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಸುಧಾ ಎಂ.ಸಿ., ಲೀಲಾವತಿ ಎನ್.ಕೆ., ಎಚ್.ಜೆ. ಭೀಮೇಶ್, ಗೋವಿಂದರಾಜು ಲಕ್ಷ್ಮೀಪುರ, ರಾಮಚಂದ್ರ, ಚೇತನ್ ಮಲಗಾವಿ, ಚೇತನ್ ಹಂಜಿ, ವಾಸುದೇವ ಶೆಟ್ಟಿ, ರಶ್ಮಿ ಪಿ.ಇ., ಪ್ರೀತಿ ಎಂ. ತಲ್ಲೂರ, ಲತಾ ಕೆ., ಅನಿಲ್ಕುಮಾರ್ ಆರ್.ಸಿ., ನಟರಾಜು ಬಿ.ಟಿ., ರಮ್ಯಾ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.