ಮೈಸೂರು: ‘ನಗರದ ಫ್ಯಾಷನ್ ಪ್ರಿಯರು, ವಧು–ವರರಿಗೆ ಅನುಕೂಲವಾಗಲೆಂದು ಇಲ್ಲಿನ ರ್ಯಾಡಿಸನ್ ಬ್ಲ್ಯೂ ಪ್ಲಾಝಾ ಹೋಟೆಲ್ನಲ್ಲಿ ಫೆ.11 ಮತ್ತು 12ರಂದು ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಹೈ ಲೈಫ್ ಬ್ರ್ಯಾಂಡ್ಸ್ ಉಡುಗೆ ಮತ್ತು ಫ್ಯಾಷನ್ ಉತ್ಪನ್ನ, ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ’ ಎಂದು ಆಯೋಜಕಿ ಶೋಮಿಕಾ ಎಸ್.ರಾವ್ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಉತ್ಪನ್ನಗಳಿಗೆ ನಮ್ಮ ಮೇಳವು ಈಗಾಗಲೇ ಹೆಸರುವಾಸಿಯಾಗಿದೆ. ದೇಶದ ವಿವಿಧ ಭಾಗಗಳ ವಿನ್ಯಾಸಕಾರರಿಂದ ವಿನ್ಯಾಸಗೊಂಡ ಲೆಹೆಂಗಾ, ಸೀರೆ, ಮದುವೆ ಉಡುಪು, ಗೌನ್ಗಳು, ಆಭರಣಗಳು ಇರಲಿವೆ. ಫೆ.11ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯ ಮಹಿಳೆಯರನ್ನು ಸನ್ಮಾನಿಸಲಾಗುವುದು’ ಎಂದರು.

ಕಾರ್ಯಕ್ರಮ ಸಂಯೋಜಕ ಎಸ್.ಶ್ರೀಕಾಂತ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.