ಮೈಸೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ತಿ.ನರಸೀಪುರ ತಾಲ್ಲೂಕಿನ ಮುಡುಕುತೊರೆ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಗಳ ಪುನರ್ನಿರ್ಮಾಣ ಕಾಮಗಾರಿ ಒಂದು ವರ್ಷದಲ್ಲಿ ಅರ್ಧದಷ್ಟು ಮಾತ್ರವೇ ಪ್ರಗತಿ ಕಂಡಿದೆ.

ಐತಿಹಾಸಿಕ ತಲಕಾಡಿನ ಪಂಚಲಿಂಗಗಳಲ್ಲಿ ಒಂದಾಗಿರುವ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವಿದು. ಪುನರ್ನಿರ್ಮಾಣ ಕಾರ್ಯ ಹೋದ ವರ್ಷ ಚುರುಕು ಪಡೆದಿತ್ತು. ಈಗ, ಕಿಟಕಿಯ ಹಂತಕ್ಕೆ ಬಂದಿದೆ. ಶಿಲೆಯಲ್ಲಿ ದೇಗುಲ ಮೈದಳೆಯುತ್ತಿದೆ.

ವಾರ್ಷಿಕ ಜಾತ್ರೆಗೆ ಸಹಸ್ರಾರು ಮಂದಿ ಭಕ್ತರು ಬರುವ ಕಾರಣದಿಂದಾಗಿ, ಅವರ ಸುರಕ್ಷತೆಯ ದೃಷ್ಟಿಯಿಂದ 15 ದಿನಗಳಿಂದ ಕಾಮಗಾರಿ ನಿಲ್ಲಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳಲಿದೆ. ಆದರೆ, 2027ರ ಜಾತ್ರೆಯ ವೇಳೆಗೂ ಎಲ್ಲ ಕಾಮಗಾರಿಯು ಪೂರ್ಣಗೊಳ್ಳುವುದು ಅನುಮಾನ ಎಂಬಂತಹ ಸ್ಥಿತಿ ಇದೆ. ಈ ನಡುವೆಯೇ, ಈಚೆಗೆ ಜರುಗಿದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

ಬಹಳಷ್ಟು ಭಕ್ತರು ಬರುವ ತಾಣ:

ತಿ.ನರಸೀಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳವರ ಜೊತೆಗೆ ಮೈಸೂರು ಜಿಲ್ಲೆ, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು ಜಿಲ್ಲೆಗಳು ಸೇರಿದಂತೆ ಹಲವು ಕಡೆಗಳಿಂದ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮೊದಲಾದ ಕಡೆಗಳಿಂದಲೂ ಅಪಾರ ಭಕ್ತರು ಮುಡುಕುತೊರೆಗೆ ಬರುತ್ತಾರೆ. ಶಾಲೆಗಳವರು ವಿದ್ಯಾರ್ಥಿಗಳನ್ನು ಪಿಕ್ನಿಕ್ಗೆಂದು ಕರೆ ತರುತ್ತಾರೆ. ಅದರಲ್ಲೂ ರಜಾ ದಿನ, ವಿಶೇಷ ದಿನಗಳು ಹಾಗೂ ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಮೆಟ್ಟಿಲುಗಳನ್ನು ಹತ್ತಿ ಹೋಗಿ ಮೇಲಿಂದ ಕಾವೇರಿ ನದಿ ಹಾಗೂ ಸುತ್ತಮುತ್ತಲ ಪರಿಸರವನ್ನು ಸವಿಯುವುದಕ್ಕೆ ಪ್ರವಾಸಿಗರು ಬಯಸುತ್ತಾರೆ.

ಆದರೆ, ಈ ಸುಕ್ಷೇತ್ರದಲ್ಲಿ ಭಕ್ತರಿಗೆ ಪ್ರಸ್ತುತ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕಾಮಗಾರಿಯು ಪ್ರಗತಿಯಲ್ಲಿ ಇರುವುದರಿಂದ, ಲಭ್ಯ ಸೌಕರ್ಯದಲ್ಲೇ ದೇವರ ದರ್ಶನ ಪಡೆದುಕೊಂಡು ಬರಬೇಕಾದ ಸ್ಥಿತಿ ಇದೆ.

ಭ್ರಮರಾಂಬಾ ಹಾಗೂ ಮಲ್ಲಿಕಾರ್ಜುನ ದೇವಸ್ಥಾನಗಳು ಶಿಥಿಲಗೊಂಡಿದ್ದರಿಂದ ಪುನರ್ ನಿರ್ಮಾಣಕ್ಕೆ ನಿರ್ಧರಿಸಿ ಚಾಲನೆ ನೀಡಲಾಗಿದೆ. ಮೂಲ ದೇವರ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಂಡು ದೇವಸ್ಥಾನವನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸಲಾಗುತ್ತಿದೆ. ದೇವರಮೂರ್ತಿಗಳ ಮೇಲಿನ ‘ವಿಮಾನ ಗೋಪುರ’ವನ್ನು ಹೊಸದಾಗಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

ಶೆಡ್ನಲ್ಲಿ ದೇವರ ಮೂರ್ತಿ:

ಭಕ್ತರ ಬಹುದಿನಗಳ ಬೇಡಿಕೆಯಂತೆ, ಪುನರ್ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ಕಾಮಗಾರಿ ಕಾರಣದಿಂದ ದೇವರ ಮೂರ್ತಿಯನ್ನು ತಗಡಿನಶೆಡ್ ರೀತಿ ಕಟ್ಟಿ ಚಿಕ್ಕ ‘ಗುಡಿ’ಯಲ್ಲಿಡಲಾಗಿದೆ. ಅಲ್ಲೆ ಪೂಜೆ–ಪುನಸ್ಕಾರ ನಡೆಯುತ್ತಿದೆ. ಭಕ್ತರು ಸರದಿ ಸಾಲಿನಲ್ಲಿ ಬರಲೆಂದು ಚಿಕ್ಕದಾದ ಸೇತುವೆ ನಿರ್ಮಿಸಲಾಗಿದೆ. ಅದರ ಮೇಲೆ ‘ಸರ್ಕಸ್’ ಮಾಡಿಕೊಂಡು ಹೋಗಿ ದೇವರ ದರ್ಶನ ಪಡೆಯಬೇಕಾದ ಸ್ಥಿತಿ ಈಗ ಇದೆ.

ಯಡಿಯೂರಪ್ಪ ಅವರಿಂದ ಚಾಲನೆ:

2020ರ ನ.25ರಂದು ದೇವಸ್ಥಾನದ ಸಂಕೀರ್ಣದ ಪುನರ್ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ‘ಎರಡೂವರೆ ವರ್ಷದೊಳಗೆ ಕಾಮಗಾರಿ ಮುಗಿಸಬೇಕು’ ಎಂದು ಸೂಚಿಸಿದ್ದರು. ಬಳಿಕ, ನಿರೀಕ್ಷಿಸಿದಷ್ಟು ವೇಗದಲ್ಲಿ ಕೆಲಸಗಳು ನಡೆದಿರಲಿಲ್ಲ.

ಇದಕ್ಕಾಗಿ, ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಬದಲಾದ ವಿದ್ಯಮಾನದಲ್ಲಿ, ಪುನರ್ನಿರ್ಮಾಣವನ್ನು ನಾವೇ ನಡೆಸಿ ಸರ್ಕಾರಕ್ಕೆ ದೇಗುಲವನ್ನು ಒಪ್ಪಿಸುತ್ತೇವೆ ಎಂದು ಸಮಿತಿ ತಿಳಿಸಿದೆ. ಅದಕ್ಕೆ ಸರ್ಕಾರದಿಂದ ತಾತ್ವಿಕ ಒಪ್ಪಿಗೆಯೂ ದೊರೆತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

2027ರ ಜಾತ್ರೆ ವೇಳೆಗೂ ಪೂರ್ಣಗೊಳ್ಳುವುದು ಅನುಮಾನ! ಜಾತ್ರೆಗಾಗಿ ಸ್ಥಗಿತಗೊಂಡಿದ್ದ ಕಾಮಗಾರಿ ಕೆಲವೇ ದಿನಗಳಲ್ಲಿ ಪುನರಾರಂಭದ ನಿರೀಕ್ಷೆ

ಶಿಲೆಯಲ್ಲಿ ನಿರ್ಮಾಣ ಸೂಕ್ಷ್ಮ ಕೆಲಸ. ದೇಗುಲದ ಕಾರ್ಯವೀಗ ಕಿಟಕಿಯ ಹಂತಕ್ಕೆ ಬಂದಿದೆ. ಜಾತ್ರೆ ಕಾರಣಕ್ಕೆ ಕಾಮಗಾರಿ ನಿಲ್ಲಿಸಲಾಗಿತ್ತು. ಕೆಲವೇ ದಿನಗಳಲ್ಲಿ ಪುನರಾರಂಭಗೊಳ್ಳಲಿದೆ
ವೆಂಕಟೇಶ್ಪ್ರಸಾದ್ ಇಒ ತಲಕಾಡು ವೈದ್ಯನಾಥೇಶ್ವರ ಸಮೂಹ ದೇವಾಲಯಗಳ ಸಮಿತಿ

ಏನೇನು ಕಾಮಗಾರಿ? ಮೊದಲ ಹಂತದಲ್ಲಿ ಭ್ರಮರಾಂಬಾ ದೇವಸ್ಥಾನವನ್ನು ಪೂರ್ಣವಾಗಿ ಕೃಷ್ಣಶಿಲೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವನ್ನು ಬಿಳಿಕಲ್ಲುಗಳಲ್ಲಿ ನಿರ್ಮಿಸಲು 2ನೇ ಹಂತದಲ್ಲಿ ಚಂದ್ರಶಾಲೆ ಹಾಗೂ 3ನೇ ಹಂತದಲ್ಲಿ ರಾಜಗೋಪುರ ನಿರ್ಮಾಣಕ್ಕೆ ಯೋಜಿಸಲಾಗಿದೆ. ಎರಡೂ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ₹ 16 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ₹ 10 ಕೋಟಿ ವೆಚ್ಚದಲ್ಲಿ ಬೆಟ್ಟಕ್ಕೆ ಸುರಕ್ಷಿತ ಗೋಡೆ ಹಾಗೂ ರಥ ಬೀದಿ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಭಕ್ತರಿಂದ ದೇಣಿಗೆ ಸಂಗ್ರಹಕ್ಕೆ ಸರ್ಕಾರ ಅನುಮತಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಿಳಂಬಕ್ಕೇನು ಕಾರಣ?

ಆರಂಭದಲ್ಲಿ ಅನುದಾನ ಲಭ್ಯತೆಯಲ್ಲಾದ ವಿಳಂಬ ಸಮರ್ಪಕವಾದ ಯೋಜನೆ ರೂಪಿಸದಿರುವುದು ಮೇಲ್ವಿಚಾರಣೆ ಕೊರತೆ ಮತ್ತಿತರ ಕಾರಣಗಳಿಂದ ಹಾಗೂ ಹಲವು ವಿಘ್ನಗಳು ಎದುರಾದ್ದರಿಂದ ಕಾಮಗಾರಿ ಆರಂಭವೇ ವಿಳಂಬವಾಗಿತ್ತು. ‘ವಾಸ್ತು ದೋಷ ಅರ್ಚಕರು ಯೋಜನೆಯಲ್ಲಿ ಬದಲಾವಣೆ ಮಾಡಿಸಿದ್ದು ಗರ್ಭಗುಡಿಯ ಬಾಗಿಲಿಗೂ ಮುಖ್ಯದ್ವಾರದ ಬಾಗಿಲಿಗೂ ವ್ಯತ್ಯಾಸ ಕಾಣಿಸಿಕೊಂಡಿದ್ದು ಮೊದಲಾದ ಕಾರಣದಿಂದ ಕಾಮಗಾರಿಯು ನಿಧಾನವಾಯಿತು. ಹೈದರಾಬಾದ್ ಕುಂಭಕೋಣಂ ಕುಕ್ಕೆ ಸುಬ್ರಹ್ಮಣ್ಯ ಉತ್ತರಕನ್ನಡ ಮೊದಲಾದ ಕಡೆಗಳಿಂದ ವಾಸ್ತುಶಾಸ್ತ್ರಜ್ಞರನ್ನು ಕರೆಸಿ ವಾಸ್ತು ಮಾಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ. ಸಮಸ್ಯೆ ಬಗೆಹರಿದ ನಂತರ ಕಾಮಗಾರಿಯು ‘ಪ್ರಗತಿಯ ಹಳಿ’ಗೆ ಮರಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.