ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ನೇಗಿಲ ಧರ್ಮ’ 15ರಂದು ತೆರೆಗೆ

Published 7 ಡಿಸೆಂಬರ್ 2023, 15:37 IST
Last Updated 7 ಡಿಸೆಂಬರ್ 2023, 15:37 IST
ಅಕ್ಷರ ಗಾತ್ರ

ಮೈಸೂರು: ‘ರೈತರ ಕುರಿತು ಮಂಡ್ಯದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಫಿಲಂಸ್ ನಿರ್ಮಿಸಿರುವ ‘ನೇಗಿಲ ಧರ್ಮ’ ಚಲನಚಿತ್ರವು ಡಿ.15ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಚಿತ್ರದ ನಿರ್ದೇಶಕ ಎಸ್.ಕೃಷ್ಣ ಸ್ವರ್ಣಸಂದ್ರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ, ಸಾಹಿತ್ಯ ನೀಡಿದ್ದು, ಎಲ್ಲ ರಂಗಕ್ಕೂ ಕೃಷಿಯೇ ಆಧಾರಸ್ತಂಭ. ಆದರೆ, ರೈತ ಸಂಕಷ್ಟದಲ್ಲಿದ್ದು, ಯುವ ರೈತರಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಈ ಎಲ್ಲದರ ಕುರಿತು ಜಾಗೃತಿ ಮೂಡಿಸುವ ಚಿತ್ರವಿದು. ಕೃಷಿ ಕಡೆಗೆ ಜನರು ಒಲವು ತೋರುವಂತೆ ಮಾಡುವ ಸಂದೇಶವಿದೆ’ ಎಂದರು.

‘ನಾಯಕ ನಟರಾಗಿ ಮಂಡ್ಯ ಮದನ್‌ಗೌಡ ನಟಿಸಿದ್ದಾರೆ. ತಾರಾಗಣದಲ್ಲಿ ನಟರಾದ ಶಿಲ್ಪಾ ಜೋಯಪ್ಪ, ನೈರುತ್ಯ, ಕಾವ್ಯ, ಶಂಖನಾದ ಅಂಜನಪ್ಪ, ಜೋಗಿ ಪುಂಗ, ಶಂಕರೇಗೌಡ, ತಗ್ಗಹಳ್ಳಿ ವೆಂಕಟೇಶ್‌, ಲಂಕೇಶ್‌, ಬಿಂದು, ಮಹಾಲಕ್ಷ್ಮಿ, ಮಂಡ್ಯ ಸತ್ಯ, ಎಂ.ಕೆ.ಮೋಹನ್‌ರಾಜ್‌, ಮಹಾಲಿಂಗು, ಜಗನ್ನಾಥಶೆಟ್ಟಿ, ಲೋಕೇಶ್‌, ಗೌಡಗೆರೆ ಮಹೇಂದ್ರ, ಕಟ್ಟೆ ಕೃಷ್ಣಮೂರ್ತಿ ಅಭಿನಯಿಸಿದ್ಧಾರೆ’ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಅರಸಯ್ಯ, ಶಂಕರೇಗೌಡ, ನಿಖಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT