ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara 2023: ಜಂಬೂಸವಾರಿ ವೀಕ್ಷಿಸಲು ಚಾಪೆ ಹಾಕಿ ಜಾಗ ಕಾಯ್ದಿರಿಸಿದರು!

Published 23 ಅಕ್ಟೋಬರ್ 2023, 8:32 IST
Last Updated 23 ಅಕ್ಟೋಬರ್ 2023, 8:32 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ (ವಿಜಯದಶಮಿ ಮೆರವಣಿಗೆ) ವೀಕ್ಷಿಸಲು ಕೆಲವರು ಸಯ್ಯಾಜಿರಾವ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹಳೆಯ ಚೀಲ, ರಗ್ಗು, ಚಾಪೆ, ಬಟ್ಟೆ ‌ಮೊದಲಾದವುಗಳನ್ನು ಹಾಸಿ ಅದರ ಮೇಲೆ ಕಲ್ಲನ್ನಿಟ್ಟು ಜಾಗ ಕಾಯ್ದಿರಿಸಿದ್ದಾರೆ.

ವಿಜಯದಶಮಿ ಮೆರವಣಿಗೆ ಮಂಗಳವಾರ ನಡೆಯಲಿದೆ. ಅದಕ್ಕಾಗಿ ಜನರು ರಸ್ತೆಬದಿಯಲ್ಲಿ ಕುಳಿತು ವೀಕ್ಷಿಸಲು ಜಾಗ ಮಾಡಿಕೊಂಡಿದ್ದಾರೆ. ಮೆರವಣಿಗೆಯು ಮಂಗಳವಾರ ಸಂಜೆ ಆರಂಭವಾಗಲಿದೆ. ಅಂದು ಬೆಳಿಗ್ಗೆಯಿಂದಲೇ ಜನರು ಬಂದು ಸೇರುತ್ತಾರೆ. ಅಂಬಾವಿಲಾಸ ಅರಮನೆ ಆವರಣದಿಂದ ಸಾಗುವ ಮೆರವಣಿಗೆಯು ಬನ್ನಿಮಂಟಪ ಮೈದಾನದ ಬಳಿ ಮುಕ್ತಾಯಗೊಳ್ಳಲಿದೆ. ಅಲಂಕೃತ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಳ್ಳಲು ಹಾಗೂ ನಮಿಸಲು ಜನರು ಉತ್ಸುಕರಾಗಿದ್ದಾರೆ. ಮಾರ್ಗದುದ್ದಕ್ಕೂ ಬ್ಯಾರಿಕೇಡ್ ಹಾಕಿ ಹಾಗೂ ಜಾಲರಿಗಳನ್ನು ಕಟ್ಟಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯದಶಮಿ ಮೆರವಣಿಗೆಯಂದು ನಗರದಲ್ಲಿ ಐದು ಲಕ್ಷ‌ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT