ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯದುವೀರ್‌ ಅವರದ್ದು ನಾಟಕದ ರಾಜಕಾರಣ: ದಲಿತ ಮುಖಂಡ ಪುರುಷೋತ್ತಮ್

Published 17 ಏಪ್ರಿಲ್ 2024, 15:27 IST
Last Updated 17 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ಮೈಸೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೂ ಯದುವೀರ್‌ ಅವರಿಗೂ ಅಜಗಜಾಂತರ ವ್ಯತ್ಯಾಸವಿದೆ. ಚುನಾವಣೆ ಗೆಲುವಿಗಾಗಿ ನಾಟಕದಲ್ಲಿ ತೊಡಗಿರುವ ಇವರಿಂದ ಬಹುಜನರ ಉದ್ಧಾರ ಸಾಧ್ಯವಿಲ್ಲ’ ಎಂದು ದಲಿತ ಮುಖಂಡ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆಗೆ ಸ್ಪರ್ಧಿಸಿರುವುದರಿಂದ ದೇವರಾಜ ಅರಸು ಸಮಾಧಿಗೆ ನಮಿಸುತ್ತಿದ್ದಾರೆ. ಯಾವತ್ತೂ ಪೌರಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸದವರು ಇಂದು ಮಾಸ್ಕ್, ಗ್ಲೌಸ್ ಧರಿಸಿ ಕಸ ಎತ್ತುತ್ತಿದ್ದಾರೆ. ಈ ಹಿಂದೆ ಎಲ್ಲಾದರೂ ಅಂಬೇಡ್ಕರ್, ಬಸವಣ್ಣ, ಗಾಂಧಿ ಪ್ರತಿಮೆಗೆ ನಮಿಸಿದ್ದ ಉದಾಹರಣೆಯಿದೆಯೇ’ ಎಂದು ಪ್ರಶ್ನಿಸಿದರು.

‘ದಲಿತರು ನಾಲ್ವಡಿ ಅವರನ್ನು ಎದೆಯಲ್ಲಿಟ್ಟುಕೊಂಡು ಸ್ಮರಿಸಿದವರು. ಅವರ ಹೆಸರನ್ನು ನಾಡಿನದ್ದಕ್ಕೂ ಪಸರಿಸಿದವರು. ಆದರೆ, ಇಂದಿನ ರಾಜಮನೆತನವಾಗಲಿ, ಅದರ ಕುಡಿ ಎಂದು ಚುನಾವಣೆಗಿಳಿದಿರುವ ಯದುವೀರ್ ಆಗಲಿ ಯಾವತ್ತೂ ದಲಿತರ ಕಷ್ಟಕ್ಕೆ, ಹಕ್ಕುಗಳ ಉಳಿವಿಗೆ ಧ್ವನಿಯೆತ್ತಿಲ್ಲ. ಭಾವನಾತ್ಮಕವಾಗಿ ಮತ ಪಡೆಯುವ ಹುನ್ನಾರ ಇಂದು ನಡೆಯುವುದಿಲ್ಲ’ ಎಂದು ಅಬ್ಬರಿಸಿದರು.

‘ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸರ್ವಜನರ ಪ್ರಗತಿಗೆ ಸೈದ್ಧಾಂತಿಕವಾಗಿ ಬದ್ಧರಾಗಿದ್ದಾರೆ. ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಜನರ ಒಡನಾಟದಲ್ಲಿದ್ದು, ದಲಿತರ, ಹಿಂದುಳಿದವರ ಅಭಿವೃದ್ಧಿಗೆ ಮುಂದಾಗುತ್ತಾರೆ. ಈ ಬಾರಿ ಎಲ್ಲೆಡೆ ಕಾಂಗ್ರೆಸ್‌ಗೆ ಬೆಂಬಲ ನೀಡಲು ಜನರು ಸಜ್ಜಾಗಬೇಕು’ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕ ವೇದಿಕೆಯ ಸಿದ್ದಸ್ವಾಮಿ, ಸೋಮಶೇಖರ್‌, ಸೋಸಲೆ ಸಿದ್ಧರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT