ಮೈಸೂರು: ‘ಆಶ್ರಯ ಯೋಜನೆಗಳಲ್ಲಿ ಪೌರಕಾರ್ಮಿಕರಿಗೆ ಆದ್ಯತೆ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ತಿಳಿಸಿದರು.

ಇಲ್ಲಿನ ಕಲಾಮಂದಿರದಲ್ಲಿ ಗುರುವಾರ ನಡೆದ ‘ಪೌರಕಾರ್ಮಿಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ತವರಲ್ಲೇ ಪೌರಕಾರ್ಮಿಕರು ಹಲವು ಸಮಸ್ಯ ಎದುರಿಸುತ್ತಿರುವುದು ಕಂಡುಬಂದಿದೆ. ಇಲ್ಲಿನ ಅಧಿಕಾರಿಗಳು ಏನು ಮಾಡುತ್ತಿದ್ದಾರೆಯೋ ತಿಳಿಯದು’ ಎಂದರು.

‘ಪೌರಕಾರ್ಮಿಕರು ಸಂಘಟಿತರಾಗಿ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಮುಖ್ಯಮಂತ್ರಿಯವರು ಬಂದಾಗ ನೇರವಾಗಿ ಅವರ ಗಮನಕ್ಕೇ ತರಬೇಕು’ ಎಂದು ತಿಳಿಸಿದರು.

‘ಪೌರಕಾರ್ಮಿಕರು ಶೌಚಕ್ಕಾಗಿ ಯಾವುದೇ ಹೋಟೆಲ್ಗಳಿಗೆ ಹೋಗಿ ಅಲ್ಲಿನ ಶೌಚಾಲಯ ಬಳಸಬಹುದು. ಅದು ನಿಮ್ಮ ಹಕ್ಕು. ಬಳಸಬೇಡಿ ಎಂದು ಯಾವ ಹೋಟೆಲ್ನವರೂ ಹೇಳುವಂತಿಲ್ಲ. ನಿರಾಕರಿಸಿದವರ ವಿರುದ್ಧ ದೂರು ಸಲ್ಲಿಸಿದರೆ ಆಯೋಗದಿಂದ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.