ಸಾಲಿಗ್ರಾಮ:  ಚುಂಚನಕಟ್ಟೆಯ ಜಾನುವಾರು ಪರಿಷೆಯಲ್ಲಿ ‘ಹಳ್ಳಿಕಾರ್ ತಳಿಯ ಹಾಲು ಹಲ್ಲಿನ ಕರುಗಳ’ ಕಾರುಬಾರು ಜೋರಾಗಿದ್ದು, ಎರಡು ಕರುಗಳು ಬರೋಬ್ಬರಿ ₹2 ಲಕ್ಷಕ್ಕೆ ಖರೀದಿಯಾಗಿವೆ.

ಹಳ್ಳಿಕಾರ್ ತಳಿಗೆ ಹೆಸರುವಾಸಿಯಾಗಿರುವ ಈ ಪರಿಷೆಯಲ್ಲಿ ಜಾನುವಾರು ಖರೀದಿಸಲು ಬಂದಿರುವ ರೈತರು ಬೆಲೆ ಕೇಳಿ ಹುಬ್ಬೇರಿಸುವ ಪರಿಸ್ಥಿತಿ ಜಾತ್ರೆಯಲ್ಲಿ ಎದುರಾಗುತ್ತಿದೆ.

ಉಳುಮೆಗೆ ಹಳ್ಳಿಕಾರ್ ಜೋಡೆತ್ತುಗಳೇ ಬೇಕು ಎಂದು ಖರೀದಿಗೆ ಮುಂದಾಗುತ್ತಿರುವ ರೈತರು ಪಕ್ಕದಲ್ಲೇ ‘ಸಿಂಗಾರದ ದಾವಣಿ’ಯಲ್ಲಿ (ಜಾನುವಾರು ಕಟ್ಟಿಹಾಕುವ ಚಪ್ಪರ) ಕಟ್ಟಿರುವ ಕರುಗಳನ್ನು ಕಂಡು ಸಾಕುವ ಹಂಬಲ ಇರುವ ಬೆಲೆಯನ್ನು ಲೆಕ್ಕಿಸದೇ ಕೆಲವು ರೈತರು ಖರೀದಿಸಿ ಮುದ್ದಾದ ಕರುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಜಾನುವಾರು ಪರಿಷೆಯಲ್ಲಿ ಈ ವರ್ಷ ಹಾಲು ಹಲ್ಲಿನ ಮುದ್ದಾದ ಕರುಗಳ ಸಂಖ್ಯೆ ಅಧಿಕವಾಗಿದ್ದು, ಪರಿಷೆ ವೀಕ್ಷಿಸಲು ಬಂದಿದ್ದ ಸಾವಿರಾರು ಮಂದಿಯಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ಮುದ್ದಾದ ಹಳ್ಳಿಕಾರ್ ತಳಿಯ ಹಾಲು ಹಲ್ಲಿನ ಕರುಗಳನ್ನು ಕಂಡು ಸೆಲ್ಫಿ ತೆಗೆದುಕೊಂಡು ಮುಟ್ಟಿ ಆನಂದಿಸಿ ಸಮಯ ಕಳೆಯುತ್ತಿರುವುದು ಸಾಮಾನ್ಯವಾಗಿದೆ.

ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿಯ ರೈತ ಕರಿಗೌಡ ಅವರಿಗೆ ಸೇರಿದ ಹಾಲು ಹಲ್ಲಿನ ಹಳ್ಳಿಕಾರ್ ತಳಿಯ ಜೋಡಿ ಕರುಗಳ ಬೆಲೆ ₹ 1.80 ಲಕ್ಷವಾಗಿದ್ದು, ಈ ಕರುಗಳನ್ನು ಹಾಸನ ಜಿಲ್ಲೆಯ ಅಣ್ಣಯ್ಯ ಅವರು ಖರೀದಿಸಿದರು.

‘ಸಾಕುವ ಉದ್ದೇಶದಿಂದ ಖರೀದಿ ಮಾಡಿರುವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಉಳುಮೆಗೆ ಅಗತ್ಯ ಇರುವ ಹಳ್ಳಿಕಾರ್ ಜೋಡೆತ್ತುಗಳ ಬೆಲೆಗಿಂತ ಹಾಲು ಹಲ್ಲಿನ ಕರುಗಳ ಬೆಲೆ ಅಧಿಕವಾಗಿರುವುದು ಇದು ಮೊದಲಲ್ಲ’ ಎಂದು ಜಾನುವಾರು ಮಾರಾಟ ದಲ್ಲಾಳಿ ಚಂದ್ರೇಗೌಡ ಪ್ರತಿಕ್ರಿಯಿಸಿದರು.

‘ಬೇಸಾಯಕ್ಕೆ ಜೋಡೆತ್ತುಗಳನ್ನು ಖರೀದಿ ಮಾಡುವುದು ಕಷ್ಟವಾಗಿರುವ ಈ ದಿನಗಳಲ್ಲಿ ಹಾಲು ಹಲ್ಲಿನ ಕರುಗಳನ್ನು ಖರೀದಿ ಮಾಡಿ ಹಳ್ಳಿಕಾರ್ ತಳಿಯ ಜಾನುವಾರುಗಳನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡಿದರೆ ಮಾತ್ರ ರೈತಾಪಿ ಜನ ಬೇಸಾಯ ಮಾಡಲು ಮುಂದಾಗುತ್ತಾರೆ. ಅದಕ್ಕಾಗಿ ಕರುಗಳನ್ನು ಖರೀದಿ ಮಾಡಲು ಬಂದಿರುವೆ’ ಎಂದು ಮಂಡ್ಯ ಜಿಲ್ಲೆಯ ಸಿದ್ದೇಗೌಡ ಪ್ರತಿಕ್ರಿಯಿಸಿದರು.

ಚುಂಚನಕಟ್ಟೆ ಜಾನುವಾರು ಪರಿಷೆಯಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಹಳ್ಳಿಕಾರ್ ತಳಿಯ ಕರುಗಳು ದಾವಣಿಯಲ್ಲಿ ನಿಂತಿದ್ದು, ಈ ಮುದ್ದಾದ ಕರುಗಳು ಪರಿಷೆಗೆ ಬರುವ ಜನರನ್ನು ತಮ್ಮತ್ತ ಆಕರ್ಷಿಸುವ ಮೂಲಕ ಪರಿಷೆಗೆ ಮೆರಗು ತರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.