ಜಯಪುರ: ‘ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಮೂರ್ತಿಗೆ ನಮ್ಮ ಜಮೀನಿನ ಶಿಲೆಯನ್ನು ಬಳಸಿರುವುದು ಹೆಮ್ಮೆ ತಂದಿದೆ’ ಎಂದು ಹೋಬಳಿಯ ಗುಜ್ಜೇಗೌಡನಪುರದ ರಾಮದಾಸ್ ಮತ್ತು ಅವರ ಮಗ ರಂಗಸ್ವಾಮಿ ಹರ್ಷ ವ್ಯಕ್ತಪಡಿಸಿದರು.
ಶಿಲೆ ದೊರೆತ ಸ್ಥಳದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಅವರು ಸಂತಸ ವ್ಯಕ್ತಪಡಿಸಿದರು. ಮೈಸೂರು ಅರಮನೆಯ ರಾಜಪುರೋಹಿತ ಪ್ರಹ್ಲಾದ್ ರಾವ್ ಸಮ್ಮುಖದಲ್ಲಿ ವಿಶೇಷ ಪೂಜೆ ನಡೆಯಿತು.