ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಸೂರು | ಕೆರೆ, ಕಲ್ಯಾಣಿಗೆ ಪುನಶ್ಚೇತನ ‘ಖಾತ್ರಿ’: ಜಲಮೂಲಗಳಿಗೆ ಹೊಸ ರೂಪ

ಜಿಲ್ಲಾ ಪಂಚಾಯಿತಿಯಿಂದ ಯೋಜನೆ; ಕೂಲಿಕಾರರ ಶ್ರಮದ ಫಲ
Published : 18 ಏಪ್ರಿಲ್ 2025, 7:26 IST
Last Updated : 18 ಏಪ್ರಿಲ್ 2025, 7:26 IST
ಫಾಲೋ ಮಾಡಿ
Comments
ಹುಣಸೂರು ತಾಲ್ಲೂಕು ತಮ್ಮಡಹಳ್ಳಿಯ ಬೀರೇಶ್ವರ ದೇವಾಲಯ ಆವರಣದ ಕಲ್ಯಾಣಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ
ಹುಣಸೂರು ತಾಲ್ಲೂಕು ತಮ್ಮಡಹಳ್ಳಿಯ ಬೀರೇಶ್ವರ ದೇವಾಲಯ ಆವರಣದ ಕಲ್ಯಾಣಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ
ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಮ ಜಲಮೂಲಗಳ ಸಂರಕ್ಷಣೆಗೆ ಆ‌ದ್ಯತೆ ದುಡಿಯುವ ಕೈಗಳಿಗೆ ಉದ್ಯೋಗ
ಜಲಮೂಲ ‌ಸಂರಕ್ಷಣೆ ಬಹಳ ಮಹತ್ವದ್ದಾಗಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಸಾಧ್ಯವಾಗುತ್ತದೆ. ಈ ಕಾರಣದಿಂದ ಆದ್ಯತೆ ನೀಡಲಾಗುತ್ತಿದೆ 
ಎಸ್.ಯುಕೇಶ್‌ ಕುಮಾರ್‌ ಸಿಇಒ ಜಿಲ್ಲಾ ಪಂಚಾಯಿತಿ
‘ಕೂಲಿ’ ಹೆಚ್ಚಳ
ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುವ ದಿನದ ಕೂಲಿಯನ್ನು ಈಚೆಗೆ ಪರಿಷ್ಕರಿಸಲಾಗಿದ್ದು ₹349ರಿಂದ ₹370ಕ್ಕೆ ಹೆಚ್ಚಿಸಲಾಗಿದೆ. ಇದು ಏ.1ರಿಂದ ಅನ್ವಯವಾಗುತ್ತಿದೆ. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ ಕೂಲಿ ಖಾತ್ರಿ ನೀಡಲಾಗುವ ಯೋಜನೆ ಇದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ ಕುಮಾರ್‌ ತಿಳಿಸಿದರು.
ಜನರ ಸಂತಸಕ್ಕೆ ಕಾರಣ
ಹುಣಸೂರು ತಾಲ್ಲೂಕು ಮೋದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರೆಕಟ್ಟೆ ಕೆರೆಯನ್ನು ಈಚೆಗೆ ಪುನಶ್ಚೇತನಗೊಳಿಸಲಾಗಿತ್ತು. ಇಲ್ಲಿ ಈಗ ಪೂರ್ವ ಮುಂಗಾರು ಮಳೆ ನೀರು ಸಂಗ್ರವಾಗಿದೆ. ಇದು ಆ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ.  ತಿ.ನರಸೀಪುರ ತಾಲ್ಲೂಕಿನ ಚಿದರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮೇಗೌಡನಪುರ ಗ್ರಾಮದಲ್ಲಿ ಪರ್ವತಪ್ಪನಕಟ್ಟೆ ಅಭಿವೃದ್ಧಿ ಕಂಡಿದೆ. ಪಿರಿಯಾಪಟ್ಟಣ ತಾಲ್ಲೂಕು ಹಂಡಿತವಳ್ಳಿ ಗ್ರಾ.ಪಂ.ನ ದೊಡ್ಡಕೆರೆ ಹಾಗೂ ಹುಣಸೂರು ತಾಲ್ಲೂಕು ಪಟ್ಟಲದಮ್ಮ ಕೆರೆ ಸೇರಿದಂತೆ ಹಲವು ಜಲಮೂಲಗಳಿಗೆ ನರೇಗಾ ಯೋಜನೆ ಬಲ ತುಂಬಿದೆ. ಕೆರೆಗಳ ಹೂಳು ತೆಗೆದ ಪರಿಣಾಮ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಿದೆ. ಮಳೆಗಾಲದಲ್ಲಿ ಇವು ಹೆಚ್ಚು ಕಂಗೊಳಿಸಲಿವೆ ಎಂಬ ಆಶಯ ಹೊಂದಲಾಗಿದೆ.
ಪ್ರಮುಖ ಕೆರೆಗಳು
ಕೊಮ್ಮೇಗೌಡನಕೊಪ್ಪಲು ಕಾಳಸಿದ್ದನಕಟ್ಟೆ ಗುರುಮಠಕೆರೆ ಪಟ್ಟಲದಮ್ಮ ಕೆರೆ ಕೆ.ಜಿ. ಹುಂಡಿ ತಾವರೆಕೆರೆ ಕೆ.ಚಾಮಹಳ್ಳಿ ಕೆರೆ ತೆಂಕಲಕೆರೆ ಬಸವರಾಜನಕಟ್ಟೆ ಕೆರೆ ಮುಂದಲಹೊಸಕಟ್ಟೆ ಬೆಟ್ಟಹಳ್ಳಿಯ ಹೊಸಕೆರೆ ಕೆಸ್ತೂರಿನ ಕೋಟೆ ಕೆರೆ ನಾಗವಾಲದ ಸಾಕದೇವಮ್ಮನ ಕಟ್ಟೆ ಮಾದಳ್ಳಿ ಕೆರೆ ಚಾಮುಂಡಿಬೆಟ್ಟದ ಕೆರೆ ನಲ್ಲಿತಾಳಪುರದ ರಾಮಯ್ಯನಕಟ್ಟೆ ಕಲ್ಕುಂದದ ಕಾಮಹಳ್ಳಿ ಕೆರೆ ಮಲ್ಕುಂಡಿಯ ಕುಂಚನಕಟ್ಟೆ ಲಂಕೆಯ ಪಿಣ್ಣಪ್ಪನಕೆರೆ ಬಿದರಹಳ್ಳಿ ಕೆರೆ ಚಕ್ಕೂರು ನಂಜವ್ವ ಕೆರೆ ಕಾಟವಾಳು ಗ್ರಾಮದ ಮಠದ ಕಟ್ಟೆ ಕೆರೆ ಸಾಗರೆಯ ಸಿದ್ದೇಗೌಡನಕೆರೆ ಅತ್ತಿಗೋಡು ನಾಗಪ್ಪನಕೆರೆ ಕುಡುಕೂರು ಗ್ರಾಮದ ಹೊಸಕೆರೆ ಪೂನಾಡಹಳ್ಳಿಯ ಅಕ್ಕೆಕಟ್ಟೆ ಆನಿವಾಳು ಗ್ರಾಮದ ಬಿದಿರುಕಟ್ಟೆ ಹೊಸ ರೂಪ ಪಡೆದುಕೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT