ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗೂರು: ₹83 ಲಕ್ಷ ವೆಚ್ಚದ ರಸ್ತೆ ಡಾಂಬರೀಕರಣಕ್ಕೆ ಚಾಲನೆ

Published 28 ಡಿಸೆಂಬರ್ 2023, 15:28 IST
Last Updated 28 ಡಿಸೆಂಬರ್ 2023, 15:28 IST
ಅಕ್ಷರ ಗಾತ್ರ

ಸರಗೂರು: ತಾಲ್ಲೂಕಿನ ಚಾಮೇಗೌಡನಹುಂಡಿ ಗ್ರಾಮದಲ್ಲಿ ₹83 ಲಕ್ಷ ವೆಚ್ಚದಲ್ಲಿ ಕಬಿನಿ ಬಲದಂಡೆ ನಾಲೆ ಏರಿಯ ಚಾಮೇಗೌಡನಹುಂಡಿ– ಪುರದಕಟ್ಟೆ ಗ್ರಾಮದ ಸಂಪರ್ಕ ರಸ್ತೆ, ಹಲಸೂರು ರಸ್ತೆ ಡಾಂಬರೀಕರಣಕ್ಕೆ ಶಾಸಕ ಅನಿಲ್ ಚಿಕ್ಕಮಾದು ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಗ್ರಾಮದಲ್ಲಿ ತಲೆದೋರಿರುವ ಸ್ಮಶಾನದ ಜಾಗದ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವಂತೆ ತಹಶೀಲ್ದಾರ್‌ಗೆ ಸೂಚಿಸುತ್ತೇನೆ. ಕೊತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಸ್ಮಶಾನ ಜಾಗವನ್ನು ಕಾನೂನಿನಡಿ ಬಿಡಿಸಲು ಕ್ರಮವಹಿಸಲಾಗುವುದು. ಶಾಲೆ ಕಟ್ಟಡ ಕಾಮಗಾರಿ ಕಳಪೆಯಾಗಿರುವ ಕುರಿತು ದೂರುಗಳು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಪಿ.ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವ್, ನಾಗರಾಜು, ಮುಖಂಡರಾದ ಶಂಭುಲಿಂಗನಾಯಕ, ಅಗತ್ತೂರು ಅಂಕನಾಯಕ, ಪಿಎಸ್‌ಐ ನಂದೀಶ್ ಕುಮಾರ್, ನಾಗರಾಜು, ತೆರಣಿಮುಂಟಿ ಗಿರೀಶ್ ಕುಮಾರ್, ಪಿಡಿಒ ನಾಗೇಂದ್ರ, ಎಂಜಿನಿಯರ್‌ ಉಷಾ, ಅವಿನಾಶ್, ಪುಟ್ಟಸ್ವಾಮಿ, ಶಿವಚೆನ್ನಪ್ಪ, ಇಟ್ನ ಬೆಟ್ಟನಾಯಕ, ಮಂಜುನಾಥ್, ಮುಳ್ಳೂರು ರಾಮನಾಯಕ, ಭಾಗ್ಯಲಕ್ಷ್ಮಿ, ಶಿವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT