ಜಯಪುರ: ಮೈಸೂರು ಬಳಿಯ ಜಯಪುರ ಅನಗಹಳ್ಳಿ ಸಮೀಪದ ತೋಟದ ಮನೆಯೊಂದರಲ್ಲಿ ದೊರೆಸ್ವಾಮಿ (30ವರ್ಷ) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಕೊಲೆಯಾದ ದೊರೆಸ್ವಾಮಿ ಮೈಸೂರು ತಾಲ್ಲೂಕು ಜಯಪುರ ಹೋಬಳಿ ಗೋಪಾಲಪುರದ ಪುಷ್ಪ ಎಂಬುವವರ ಮಗ.

ಬೆಂಗಳೂರು ಮೂಲದ ಶ್ವೇತಾ ಎಂಬುವವರ ಜೊತೆ ಅನಗಹಳ್ಳಿಯಲ್ಲಿ ತಮ್ಮ ತೋಟದ ಮನೆಯಲ್ಲಿ ದೊರೆಸ್ವಾಮಿ ವಾಸವಿದ್ದರು. ಕೊಲೆಯ ನಂತರ ಶ್ವೇತಾ ನಾಪತ್ತೆಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿ.ವೈ.ಎಸ್.ಪಿ ಕರಿಂ ರಾವತರ್, ಸರ್ಕಲ್ ಇನ್ ಸ್ಪೆಕ್ಟರ್ ಶಿನಂಜಶೆಟ್ಟಿ, ಜಯಪುರ ಠಾಣಾ ಪಿಎಸ್ಐ ಪ್ರಕಾಶ್ ಯತ್ತಿನಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದೊರೆಸ್ವಾಮಿ ಮೇಲೆ ಜಯಪುರ ಠಾಣೆಯಲ್ಲಿ 307, ಎನ್.ಸಿ.ಆರ್ ಪ್ರಕರಣ ದಾಖಲಾಗಿದ್ದವು. ಮೈಸೂರು ನಗರದ ವಿಜಯನಗರ ಮತ್ತು ಹುಣಸೂರು ತಾಲ್ಲೂಕು ಬಿಳಿಕೆರೆ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಜಯಪುರ ಠಾಣಾ ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ವ್ಯಕ್ತಿ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.