ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಿಲೇ: ತುಮಕೂರು, ಮೈಸೂರಿಗೆ ಚಿನ್ನ

ವಿಟಿಯು ವ್ಯಾಪ್ತಿಯ ಕಾಲೇಜುಗಳ ಅಥ್ಲೆಟಿಕ್ಸ್‌
Published 29 ಜೂನ್ 2024, 4:47 IST
Last Updated 29 ಜೂನ್ 2024, 4:47 IST
ಅಕ್ಷರ ಗಾತ್ರ

ಮೈಸೂರು: ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪುರುಷ ಹಾಗೂ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನ ಮಹಿಳಾ ರಿಲೇ ತಂಡಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ರಾಜ್ಯ ಮಟ್ಟದ 25ನೇ ಅಥ್ಲೆಟಿಕ್ಸ್ ಕೂಟದಲ್ಲಿ ಗುರುವಾರ ಚಿನ್ನ ಗೆದ್ದವು. 

ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಮೂರನೇ ದಿನ 4x100 ರಿಲೇ ಫೈನಲ್‌ನಲ್ಲಿ ತೇಜಸ್‌, ಕೃಷಿಕ್, ಚಿರಂತ್‌ ಹಾಗೂ ಹರ್ಷ ಅವರನ್ನು ಒಳಗೊಂಡ ಸಿದ್ಧಗಂಗಾ ಕಾಲೇಜು ತಂಡವು 45.13 ಸೆಕೆಂಡುಗಳಲ್ಲಿ ಗುರಿ ತಲುಪಿತು. ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಹಾಗೂ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು.

ಮಹಿಳೆಯರ 4x100 ರಿಲೇ ಫೈನಲ್‌ನಲ್ಲಿ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರೇರಣಾ, ಸೋನಿಕಾ, ಅನ್ನಪೂರ್ಣ ಹಾಗೂ ಆರ್ಯಾ ರಾಜ್‌ ಅವರನ್ನು ಒಳಗೊಂಡ ತಂಡವು 58.32 ಸೆಕೆಂಡುಗಳಲ್ಲಿ ಚಿನ್ನ ಗೆದ್ದರೆ, ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಬೆಂಗಳೂರಿನ ಎಂವಿಜೆ ಕಾಲೇಜು ತಂಡಗಳು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿಗೆ ಕೊರಳೊಡ್ಡಿದವು.

ಫಲಿತಾಂಶ: ಪುರುಷರು: ಟ್ರಿಪಲ್ ಜಂಪ್‌: ಎಸ್‌.ಅಜಯ್‌ (ರಾಮಯ್ಯ ಎಂಜಿನಿಯರಿಂಗ್ ಕಾಲೇಜು)–1, ಮೊಹಮ್ಮದ್‌ ತಾವಾಯಿಪ್ (ಸಹ್ಯಾದ್ರಿ ಕಾಲೇಜು, ಮಂಗಳೂರು. ದೂರ: 12.87 ಮೀ.)–2, ಆನಂದ್‌ ಮಾರುತಿ ವೆರ್ಣೇಕರ್‌ (ಅಮೃತ ಎಂಜಿನಿಯರಿಂಗ್ ಕಾಲೇಜು)–3. 110 ಮೀ. ಹರ್ಡಲ್ಸ್: ಹರ್ಷ (ಸಿದ್ಧಗಂಗಾ ಎಂಜಿನಿಯರಿಂಗ್ ಕಾಲೇಜು, ತುಮಕೂರು. ಕಾಲ: 17.29 ಸೆಕೆಂಡ್‌)–1, ಕಾರ್ತಿಕ್–2, ಸನ್ಮಿತ್‌ (ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು, ಪುತ್ತೂರು)–3; 5,000 ಮೀಟರ್ಸ್ ಓಟ: ಎ.ಎಂ.ತಿಶನ್ (ಕೆವಿಜಿ ಕಾಲೇಜು, ಸುಳ್ಯ. ಕಾಲ: 17 ನಿ 54.67 ಸೆ)–1, ಆರ್‌.ಶರತ್‌ (ಬಿಎಂಎಸ್‌ ಕಾಲೇಜು–2), ಅಕ್ಷಯ್‌ (ಶ್ರೀನಿವಾಸ ತಾಂತ್ರಿಕ ವಿದ್ಯಾಲಯ)–3. 

ಮಹಿಳೆಯರು: ಟ್ರಿಪಲ್‌ ಜಂಪ್: ಅರ್ಪಿತಾ ಬಾಲಚಂದ್ರ ನಾಯಜ್ (ವಿವೇಕಾನಂದ ಕಾಲೇಜು, ಪುತ್ತೂರು, ದೂರ: 9.20 ಮೀ.)–1, ಲಾವಣ್ಯ (ನವಕೀಸ್‌ ಕಾಲೇಜು, ಹಾಸನ)–2, ಬಿ.ಸ್ಫೂರ್ತಿ (ಗ್ಲೋಬಲ್ ಅಕಾಡೆಮಿ ಕಾಲೇಜು, ಬೆಂಗಳೂರು)–3; 5,000 ಮೀಟರ್ಸ್ ಓಟ: ಕೆ.ಟಿ.ಚೊಂಡಮ್ಮ (ಕೂರ್ಗ್ ಎಂಜಿನಿಯರಿಂಗ್ ಕಾಲೇಜು, ಪೊನ್ನಂಪೇಟೆ. ಕಾಲ: 21 ನಿ 52.70 ಸೆಕೆಂಡ್‌)–1, ಶ್ರೇಯಾ (ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು, ಮಂಗಳೂರು)–2, ವಿಭಾ ವಾಸುದೇವನ್ (ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜು, ಬೆಂಗಳೂರು–3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT