ಹುಲ್ಲಹಳ್ಳಿ (ನಂಜನಗೂಡು): ತಾಲ್ಲೂಕಿನ ಬೆಳಲೆ ಗೇಟ್ ಸಮೀಪದ ಹಜರತ್ ಸೈದಾನಿ ಬೀ ಮಾ ಸನ್ನಿಧಿಯಲ್ಲಿ ಭಾನುವಾರ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಹಜರತ್ ಸೈದಾನಿ ಬೀ ಮಾ ಗಂಧದ ಉರುಸ್ ಜರುಗಿತು.

ಹುಲ್ಲಹಳ್ಳಿ ಗ್ರಾಮದ ಜಾಮಿಯಾ ಮಸೀದಿಯಿಂದ ಹೂವಿನಿಂದ ಅಲಂಕರಿಸಿದ್ದ ಪಲ್ಲಕ್ಕಿಯನ್ನು ವಾಹನದಲ್ಲಿ ಇರಿಸಿ, ಊರಿನ ಪ್ರಮುಖ ರಸ್ತೆಗಳಲ್ಲಿ ಗಂಧದ ಮೆರವಣಿಗೆಯನ್ನು ನಡೆಸಲಾಯಿತು, ನಂತರ ಅಜರತ್ ಸೈದಾನಿ ಬೀ ಮಾ ದರ್ಗಾಕ್ಕೆ ಗಂಧವನ್ನು ಸಮರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತ ಮಲ್ಲಿಕಾರ್ಜುನ ವಿರಕ್ತ ಮಠಾಧ್ಯಕ್ಷ ಇಮ್ಮಡಿ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮಿಜಿ ಮಾತನಾಡಿ, ‘ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಟ್ಟಿಗೆ ಸೇರಿ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ದರ್ಗಾಕ್ಕೆ ಹೆಚ್ಚಾಗಿ ಮುಸ್ಲಿಂ ಸಮುದಾಯದವರಿಗಿಂತ ಹಿಂದೂ ಭಕ್ತರೇ ಹೆಚ್ಚಾಗಿ ನಡೆದುಕೊಳ್ಳುತ್ತಾರೆ, ಹಿಂದೂ, ಮುಸ್ಲಿಂಮರು ಭಾವಕ್ಯತೆಯಿಂದ ಬಾಳಬೇಕು’ ಎಂದು ತಿಳಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ದರ್ಗಾ ಶರೀಫ್ ಗುರುಗಳಾದ ಟಿ.ಎಸ್.ಕೆ. ಅಹ್ಮದ್ ಮೌಲ್ವಿ, ಕಮಿಟಿ ಅಧ್ಯಕ್ಷ ಹಾಜಿ ನೂರ್ ಅಹಮದ್, ಶಹಜಾನ್, ಸಮಿವುಲ್ಲಾ, ನಾಜೀರ್ ಅಹಮದ್, ಜಾಮಿಯ ಮಸೀದಿ ಅಧ್ಯಕ್ಷ ಮುಶಿರ್ ಅಹಮದ್, ಜಾವಿದ್ ಅಹಮದ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.