ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದ ಪ್ರಸಾದ್‌: ಮಡ್ಡೀಕೆರೆ ಗೋಪಾಲ್ ಅಭಿಮತ

Published 9 ಮೇ 2024, 13:43 IST
Last Updated 9 ಮೇ 2024, 13:43 IST
ಅಕ್ಷರ ಗಾತ್ರ

ಮೈಸೂರು: ‘ಶ್ರೀನಿವಾಸ್‌ ಪ್ರಸಾದ್‌ ಅವರು ಐದು ದಶಕದ ರಾಜಕಾರಣದಲ್ಲಿ ಕಪ್ಪುಚುಕ್ಕೆಯಿಲ್ಲದೆ ಬದುಕಿದ್ದರು. ಅವರ ಜೀವನ ಕಥೆ ಇಂದಿನ ರಾಜಕಾರಣಿಗಳಿಗೆ ಮಾದರಿ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ವಿ.ಶ್ರೀನಿವಾಸ್‌ ಪ್ರಸಾದ್‌ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತಳ‌ ಸಮುದಾಯದಿಂದ ಬಂದ ಅವರು ಸ್ವಾಭಿಮಾನಿ ರಾಜಕಾರಣಿಯಾಗಿ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ವ್ಯಕ್ತಿಯಾಗಿರದೆ ಶೋಷಿತರ ಶಕ್ತಿಯಾಗಿ ಬಿಂಬಿತವಾಗಿದ್ದರು. ಎಲ್ಲಾ ಸಮುದಾಯದವರ ಜೊತೆ ಅವರು ನಡೆದುಕೊಳ್ಳುತ್ತಿದ್ದ ರೀತಿ ನಮಗೆಲ್ಲಾ ಮಾದರಿ’ ಎಂದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ನೀಲಗಿರಿ ತಳವಾರ ಮಾತನಾಡಿ, ‘ಶ್ರೀನಿವಾಸ್‌ ಪ್ರಸಾದ್ ನಮ್ಮ ನಾಡು ಕಂಡ ಅಪರೂಪದ ವ್ಯಕ್ತಿ. ಅಂತಹ ಸಂವೇದನಾಶೀಲ ರಾಜಕಾರಣಿ ಇಂದಿನ ದಿನಗಳಲ್ಲಿ ಕಡಿಮೆ ಕಾಣಸಿಗುತ್ತಾರೆ. ಅವರು ಓಲೈಕೆಯ ರಾಜಕಾರಣದಿಂದ ದೂರ ಉಳಿದ ಸರಳತೆಯ ರಾಜಕಾರಣಿ’ ಎಂದು ಹೇಳಿದರು.

‘ಬೃಹತ್ ಗ್ರಂಥ ಹಾಗೂ ಉದ್ದದ ಭಾಷಣದಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ಪ್ರಸಾದ್ ಅವರು ಎಡಿಟರ್ ಆಗಿದ್ದು ಅವರು ಹೇಳಿದ್ದನ್ನು ನಾನು‌ ಬರೆಯುತ್ತಿದ್ದೆ. ಒಂದು ಮಾತು ಹೆಚ್ಚು ಒಂದು ಮಾತು ಕಡಿಮೆ ಅನ್ನುವ ರೀತಿ ನಮ್ಮ‌ಲ್ಲಿ ಪುಸ್ತಕಗಳನ್ನು ಬರೆಸಿದ್ದರು. ನಿಷ್ಠುರ ಮಾತುಗಳಿದ್ದರೂ ಅದರಲ್ಲಿ ಮಮತೆಯೂ ಇತ್ತು’ ಎಂದು ತಿಳಿಸಿದರು.

ರಂಗಕರ್ಮಿ ರಾಜಶೇಖರ ಕದಂಬ, ಕಾಂಗ್ರೆಸ್‌ ಮುಖಂಡ ಸಿ.ಬಸವೇಗೌಡ, ರಘುರಾಮ್ ವಾಜಪೇಯಿ, ಜಿ.ಪ್ರಕಾಶ್, ರತ್ನ ಹಾಲಪ್ಪ, ವೈ.ಡಿ. ರಾಜಣ್ಣ, ಚಂದ್ರಶೇಖರ್, ಸಾಹಿತಿ ಚಂದ್ರು, ಎಂ‌‌‌.ಬಿ.ಜೈಶಂಕರ್, ಸೋಮಶೇಖರ್, ಡಾ.ಮೋಹನ್, ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT