ಮೈಸೂರು: ಇನ್ನೇನು ಎಸ್ಎಸ್ಎಲ್ಸಿ ಪರೀಕ್ಷೆ ಸಮೀಪಿಸಿದೆ. ಈ ಬಾರಿ ಜಿಲ್ಲೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸುವ ಪ್ರಯತ್ನದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯು, ‘ಮಿಷನ್–40’ ಹೆಸರಿನಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ‘ಪಾಸಾಗುವ’ ತಂತ್ರ ಹೇಳಿಕೊಡುತ್ತಿದೆ.

ಜಿಲ್ಲೆಯಲ್ಲಿ ಈ ಸಾಲಿನಲ್ಲಿ 39 ಸಾವಿರ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇವರಲ್ಲಿ ಕಲಿಕೆಯಲ್ಲಿ ತೀರ ಹಿಂದೆ ಉಳಿದಿರುವ 5,321 ಮಕ್ಕಳನ್ನು ಗುರುತಿಸಲಾಗಿದೆ. ಇವರೆಲ್ಲ ಸಾಮಾನ್ಯ ಪರೀಕ್ಷೆಗಳಲ್ಲಿ 80ಕ್ಕೆ 20ಕ್ಕಿಂತ ಕಡಿಮೆ ಅಂಕ ಪಡೆದವರು. ಇಂತಹ ವಿದ್ಯಾರ್ಥಿಗಳಿಗೆಂದೇ ವಿಶೇಷ ತರಗತಿಗಳು ಎಲ್ಲೆಡೆ ನಡೆಯುತ್ತಿವೆ. ಗುಂಪು ಚರ್ಚೆಗಳ ಮೂಲಕ ಅವರಲ್ಲಿನ ಅಧ್ಯಯನ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನವೂ ನಡೆದಿದೆ.

33 ಅಂಕ ಸಾಕು: ಈ ಸಾಲಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇರುವ ಕನಿಷ್ಠ ಅಂಕಗಳ ಸಂಖ್ಯೆಯನ್ನು ಸರ್ಕಾರ 33ಕ್ಕೆ ಇಳಿಸಿದೆ. 100 ಅಂಕಗಳ ಪೈಕಿ 20 ಅಂಕಗಳಿಗೆ ಆಂತರಿಕ ಪರೀಕ್ಷೆ ಇದ್ದು, ಇನ್ನು 80 ಅಂಕಗಳಿಗೆ ಮಾತ್ರ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆಯಬೇಕಿದೆ.

ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಜಿ.ಪಂ. ಸಿಇಒ ಯುಕೇಶ್ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕಳೆದ ವರ್ಷ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳನ್ನು ಅಧಿಕಾರಿಗಳು ತದ್ದು ಪಡೆದಿದ್ದು, ಪ್ರತಿ ವಾರ ಇಂತಹ ಶಾಲೆಗಳ ಮಕ್ಕಳ ಕಲಿಕಾ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ.

‘ಮಕ್ಕಳಲ್ಲಿ ಕಲಿಕೆ ಉತ್ತೇಜಿಸಲು ಓಪನ್ ಬುಕ್ ಮಾದರಿ ಕಿರುಪರೀಕ್ಷೆಗಳನ್ನು ಆಯೋಜಿಸುತ್ತಿದ್ದೇವೆ. ಆಯಾ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಯಾವ ವಿಷಯ ಕಷ್ಟ ಆಗುತ್ತಿದೆ? ಎಷ್ಟು ವಿಷಯದಲ್ಲಿ ಪಾಸಾಗಬಹುದು? ಕಲಿಕೆ ಸುಧಾರಣೆಗೆ ಏನು ಮಾಡಬಹುದು? ಎಂಬುದನ್ನು ಗಮನಿಸುತ್ತಿದ್ದಾರೆ. ಪರೀಕ್ಷಾ ಮಂಡಳಿಯು ನೀಡಿರುವ ‘ಕಲಿಕಾ ದೀಪ್ತಿ’ ಹೆಸರಿನ ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳನ್ನು ಕೊಟ್ಟು ಅಭ್ಯಾಸ ಮಾಡಿಸುತ್ತಿದ್ದೇವೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಈ ಬಾರಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಲಾಗಿದ್ದು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ‘ಮಿಷನ್–40’ ಹೆಸರಿನಲ್ಲಿ ವಿಶೇಷ ತರಗತಿ–ತರಬೇತಿ ನಡೆಯುತ್ತಿದೆ
ಉದಯ್ ಕುಮಾರ್, ಡಿಡಿಪಿಐ

ಅಂಕಿ–ಅಂಶ

39,263– ಈ ಸಾಲಿನಲ್ಲಿ ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳು

36,060 ಸಾಮಾನ್ಯ ವಿದ್ಯಾರ್ಥಿಗಳು

2475– ಪುನರಾವರ್ತಿತ ವಿದ್ಯಾರ್ಥಿಗಳು

728– ಖಾಸಗಿ ಅಭ್ಯರ್ಥಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.