ಸುತ್ತೂರು ( ಮೈಸೂರು ಜಿಲ್ಲೆ): ಕರ್ನಾಟಕದ ಪ್ರಸಿದ್ಧ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಶಿವರಾತ್ರೀಶ್ವರ ಶಿವಯೋಗಿಗಳ ರಥೋತ್ಸವವು ಶನಿವಾರ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಭಕ್ತರು ಸಾಕ್ಷಿ ಆದರು.

ಬೆಳಿಗ್ಗೆ 11ಕ್ಕೆ ಸುತ್ತೂರು ವೀರಸಿಂಹಾಸನ ಮಠದ ಕರ್ತೃಗದ್ದುಗೆ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆತಿದ್ದು, ಭಕ್ತರು 'ಹರಹರ ಮಹದೇವ', 'ಜೈ ಶಿವರಾತ್ರೀಶ್ವರ' ಎಂದು ಘೋಷಣೆ ಕೂಗುತ್ತ ರಥದ ಮಿಣಿ ಎಳೆದರು. ಕೆಲವರು ದೂರದಿಂದಲೇ ರಥಕ್ಕೆ ಹಣ್ಣು-ಜವನ ಎಸೆದು ನಮಿಸಿದರು.

ಭಕ್ತರ ಜಯಘೋಷದ ನಡುವೆ ಸುತ್ತೂರು ಮೂಲಮಠದವರೆಗೂ ಸಾಗಿದ ರಥವು ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ಕತೃಗದ್ದುಗೆಗೆ ಮರಳಿತು. ರಸ್ತೆಯ ಎರಡೂ ಬದಿಗಳಲ್ಲಿ ಕೈಜೋಡಿಸಿ ನಿಂತ ಭಕ್ತರು ಶಿವರಾತ್ರೀಶ್ವರರಿಗೆ ಮನದಲ್ಲೇ ನಮಿಸಿ ತಮ್ಮ ಹರಕೆ ಸಲ್ಲಿಸಿದರು.

ರಥವು ಸುತ್ತೂರಿನ ರಾಜಬೀದಿಯಲ್ಲಿ ಸಾಗುವಾಗ ತಮಟೆ, ನಗಾರಿ ವಾದ್ಯಗಳ ಸದ್ದು ಮುಗಿಲುಮುಟ್ಟಿತು. 40ಕ್ಕೂ ಹೆಚ್ಚು ಕಲಾ ತಂಡಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಗಮನ ಸೆಳೆದ ವು. ನಂದಿಧ್ವಜದಿಂದ ಆರಂಭಗೊಂಡು ವೀರಗಾಸೆ, ಡೊಳ್ಳು–ಕಂಸಾಳೆ, ಪಟ ಕುಣಿತ, ಪೂಜಾ ಕುಣಿತ ಮೊದಲಾದ ಪ್ರದರ್ಶನಗಳು ರಂಜಿಸಿದವು.

ರಥೋತ್ಸವಕ್ಕೆ ಬಂದ ಭಕ್ತರು ಜಾತ್ರೆಯ ಖರೀದಿಯಲ್ಲೂ ಪಾಲ್ಗೊಂಡರು. ಹತ್ತಾರು ಮಳಿಗೆಗಳಲ್ಲಿ ವ್ಯಾಪಾರ–ವಹಿವಾಟು ನಡೆಯಿತು. ಜೊತೆಗೆ ಕೃಷಿ ಮೇಳ, ವಸ್ತುಪ್ರದರ್ಶನಗಳು ರಂಜಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.