ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಕಾಡು: ಕೃಷಿ ಅಧಿಕಾರಿಗಳಿಂದ ಭತ್ತ ಪರಿಶೀಲನೆ

Published 7 ಜುಲೈ 2023, 14:24 IST
Last Updated 7 ಜುಲೈ 2023, 14:24 IST
ಅಕ್ಷರ ಗಾತ್ರ

ತಲಕಾಡು: ಮಾಧವ ಮಂತ್ರಿ ಅಣೆಕಟ್ಟೆ ನಾಲಾ ಅಚ್ಚುಕಟ್ಟು ಪ್ರದೇಶದ ಕುಕ್ಕುರು ವ್ಯಾಪ್ತಿಯಲ್ಲಿ ಬೆಳೆದ ಹೈಬ್ರಿಡ್ ಸಣ್ಣ ಭತ್ತದ ಗದ್ದೆಗಳಿಗೆ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಸುಹಾಸಿನಿ, ರೈತ ಸಂಘದ ಸದಸ್ಯರು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

‘15 ದಿನಗಳಿಂದ ತೇವಾಂಶದಿಂದ ಕೂಡಿರುವ ಹವಾಗುಣದಿಂದಾಗಿ ಭತ್ತದ ತೆನೆ ಹೊರಬರಲು ಸಮಯದ ಅವಶ್ಯಕತೆ ಇದೆ. ರೈತರು ಜಮೀನುಗಳಲ್ಲಿ ಕಳೆ ನಿರ್ವಹಣೆ ಮಾಡದಿರುವುದರಿಂದ ಹಾಗೂ ನೀರಿನ ಕೊರತೆಯಿಂದ ತೆನೆ ಬರಲು ತಡವಾಗಿದೆ. ವಾತಾವರಣದಲ್ಲಿ ಬದಲಾವಣೆ ಕಂಡು ಬಂದರೆ ಇನ್ನೊಂದು ವಾರದಲ್ಲಿ ಬಹುತೇಕ ಹೈಬ್ರಿಡ್ ಭತ್ತದ ತೆನೆಯಾಗಲಿದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ’ ಎಂದು ಸುಹಾಸಿನಿ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಜಯಲಕ್ಷ್ಮಿ, ಕಂದಾಯ ಇಲಾಖೆ ಸಿಬ್ಬಂದಿ ಸುಧಾ, ಬಯೋ ಸೀಡ್ ಕಂಪನಿಯ ಸುರೇಶ್, ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ದಿನೇಶ್, ತಲಕಾಡು ಹೋಬಳಿಯ ರೈತ ಸಂಘದ ಅಧ್ಯಕ್ಷ ಚೆಲುವರಾಜು, ಸದಸ್ಯರಾದ ರಾಜೇಶ್, ವಿಜಯ್ ಕುಮಾರ್, ರೈತರಾದ ರಂಗನಾಯಕ್, ಮಿತ್ರ ಮಹದೇವ್, ಕುಕ್ಕುರು ಶಾಂತರಾಜು, ಹೇಮಂತ್ ಕುಮಾರ್, ವಿಶ್ವನಾಥ್, ನಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT