ಮೈಸೂರು: ನಗರದ ಪ್ರತಿಭಾನ್ವಿತ ಈಜುಪಟು ಎಸ್. ತಾನ್ಯಾ, ದೆಹಲಿಯ ಎಸ್.ಪಿ. ಮುಖರ್ಜಿ ಕ್ರೀಡಾಂಗಣದಲ್ಲಿ ಫೆ. 7ರಿಂದ 13ರವರೆಗೆ ನಡೆಯಲಿರುವ ಬಿಐಎಂಎಸ್‌ಟಿಇಸಿ ಅಂತರರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಸ್ಪರ್ಧೆಗೆ ಆಯ್ಕೆಯಾದ ಮೈಸೂರಿನ ಮೊದಲ ಈಜುಪಟು ಎಂಬ ಹೆಗ್ಗಳಿಕೆ ಅವರದ್ದು.

ಚಾಂಪಿಯನ್‌ಷಿಪ್‌ನಲ್ಲಿ ಅವರು 400 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ಸ್ಪರ್ಧೆ ಒಡ್ಡಲಿದ್ದಾರೆ. 14 ವಯಸ್ಸಿನ ತಾನ್ಯಾ, ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಅತ್ಯಂತ ಕಿರಿಯ ವಯಸ್ಸಿನ ಈಜುಪಟು ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಸ್ಪರ್ಧೆಯಲ್ಲಿ 7 ದೇಶಗಳ 14ರಿಂದ 20 ವಯಸ್ಸಿನ ಒಳಗಿನ ಈಜುಪಟುಗಳು ಸ್ಪರ್ಧಿಸಲಿದ್ದಾರೆ.

ತಾನ್ಯಾ ಮೈಸೂರಿನ ಜೆ.ಪಿ. ನಗರದ ಗ್ಲೋಬಲ್ ಸ್ಪೋರ್ಟ್ಸ್‌ನ ಪವನ್‌ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.