ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಥಿಯೇಟರ್ ಫೊಕ್ಸ್‌ನಿಂದ ಸ್ಟ್ಯಾಂಡಪ್ ಕಾಮಿಡಿ ನಾಳೆ

Published 11 ಮೇ 2023, 14:26 IST
Last Updated 11 ಮೇ 2023, 14:26 IST
ಅಕ್ಷರ ಗಾತ್ರ

ಮೈಸೂರು: ಥಿಯೇಟರ್ ಫೊಕ್ಸ್ ತಂಡದಿಂದ ನಗರದ ಕಿರು ರಂಗಮಂದಿರದಲ್ಲಿ ಮೇ 13ರಂದು ಸಂಜೆ 6.30ಕ್ಕೆ ‘ಮೈಸೂರು ಸ್ಟ್ಯಾಂಡಪ್ ಕಾಮಿಡಿಯನ್ಸ್ ಕನ್ನಡ ಓಪನ್ ಮೈಕ್’ ಕಾಮಿಡಿ ಪ್ರದರ್ಶನ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಂಡದ ಸಂಚಾಲಕ ಪ್ರಜ್ವಲ್ ಮಾತನಾಡಿ, ‘ಕೆಲಸದ ಒತ್ತಡದಿಂದ ನೆಮ್ಮದಿ ಬಯಸುವ ನಗರವಾಸಿಗಳನ್ನು ರಂಜಿಸಲು ಹಾಗೂ ಹೊಸ ಹಾಸ್ಯ ಕಲಾವಿದರಿಗೆ ವೇದಿಕೆ ಒದಗಿಸಲು ಪ್ರದರ್ಶನ ಆಯೋಜಿಸಲಾಗಿದೆ’ ಎಂದರು.

‘ರಾಜ್ಯದ ವಿವಿಧ ಭಾಗಗಳಿಂದ ಎಂಟು ಕಲಾವಿದರು ಪ್ರದರ್ಶನ ನೀಡಲು ಹೆಸರು ನೋಂದಾಯಿಸಿದ್ದಾರೆ. ಕನ್ನಡ ಸ್ಟ್ಯಾಂಡಪ್ ಕಾಮಿಡಿಯಲ್ಲಿ ಇದೇ ಮೊದಲ ಬಾರಿ ಸಭಿಕರು ನೀಡಿದ ವಿಷಯದ ಮೇಲೆ ಪ್ರದರ್ಶನ ನೀಡುವ ‘ಇಂಪ್ರೂವ್’ ಪ್ರಯೋಗ ಕೂಡ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಕುಟುಂಬದೊಡನೆ ಪ್ರತಿಯೊಬ್ಬರೂ ವೀಕ್ಷಿಸಬಹುದಾದ ಸಭ್ಯ ಕಾಮಿಡಿ ಶೋ ಇದು. ಮಾಹಿತಿ ಹಾಗೂ ಟಿಕೆಟ್‌ಗಾಗಿ ಮೊ.ಸಂ. 81508 06271, 90362 22859 ಸಂಪರ್ಕಿಸಿ’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತಂಡದ ಕಾರ್ಯ ನಿರ್ವಾಹಕರಾದ ಹೃತಿಕ್, ದರ್ಶನ್, ಧೀರಜ್, ಗ್ರಾಫಿಕ್‌ ಡಿಸೈನರ್ ರಾಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT