ಮೈಸೂರು: ರಾಷ್ಟ್ರೀಯ ಹೆದ್ದಾರಿ–206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ ಕಾರಣದಿಂದಾಗಿ ಬೀರೂರು–ತಾಳಗುಪ್ಪ ಹಾಗೂ ಅರಸೀಕೆರೆ–ಚಿಕ್ಕಜಾಜೂರು ನಡುವೆ ರೈಲ್ವೆ ‘ಲೈನ್ ಬ್ಲಾಕ್' ಇರುವುದರಿಂದಾಗಿ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ರೈಲುಗಳ ಸಂಚಾರ ರದ್ದು: ತುಮಕೂರು–ಶಿವಮೊಗ್ಗ ಟೌನ್ ಎಕ್ಸ್ಪ್ರೆಸ್ (16567) ಫೆ.16, 19, 23, 24 ಹಾಗೂ ಮಾರ್ಚ್ 2ರಿಂದ 5ರವರೆಗೆ ಸಂಚರಿಸುವುದಿಲ್ಲ. ಇದರ ವಿರುದ್ಧ ದಿಕ್ಕಿನ ಶಿವಮೊಗ್ಗ ಟೌನ್–ತುಮಕೂರು ಎಕ್ಸ್ಪ್ರೆಸ್ (16568) ರೈಲು ಫೆ. 17, 20, 24, 25 ಹಾಗೂ ಮಾರ್ಚ್ 3 ರಿಂದ 6ರವರೆಗೆ ರದ್ದಾಗಲಿದೆ. ಹುಬ್ಬಳ್ಳಿ–ಅರಸೀಕೆರೆ ಎಕ್ಸ್ಪ್ರೆಸ್ (16214) ಫೆ. 23, 24 ಹಾಗೂ ಅರಸೀಕೆರೆ–ಹುಬ್ಬಳ್ಳಿ ಎಕ್ಸ್ಪ್ರೆಸ್ (16213) ಫೆ. 24, 25ರಂದು ರದ್ದಾಗಿವೆ. ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ-ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್ಪ್ರೆಸ್ (12089/12090) ರೈಲುಗಳು ಫೆ. 24 ಮತ್ತು 25ರಂದು ರದ್ದಾಗಿವೆ.

ತಡವಾಗಿ ಹೊರಡುವ ರೈಲುಗಳು: ಶಿವಮೊಗ್ಗ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (12090) ಫೆ. 17, 20 ಮತ್ತು ಮಾರ್ಚ್ 3ರಿಂದ 6ರವರೆಗೆ ಶಿವಮೊಗ್ಗದಿಂದ 75 ನಿಮಿಷ ತಡವಾಗಿ ಹೊರಡಲಿದೆ. ಅದೇ ರೀತಿ, ಅರಸೀಕೆರೆ–ಹುಬ್ಬಳ್ಳಿ ರೈಲು (16213) ಫೆ. 17, 20 ಮತ್ತು ಮಾರ್ಚ್ 3ರಿಂದ 6ರವರೆಗೆ ಅರಸೀಕೆರೆಯಿಂದ ನಿಗದಿತ ಸಮಯಕ್ಕಿಂತ 45 ನಿಮಿಷ ತಡವಾಗಿ ಪ್ರಯಾಣ ಆರಂಭಿಸಲಿದೆ.

ರೈಲುಗಳ ನಿಯಂತ್ರಣ: ಫೆ.25ರಂದು ಕೆಎಸ್ಆರ್ ಬೆಂಗಳೂರು–ಧಾರವಾಡ ವಂದೇಭಾರತ್ ಎಕ್ಸ್ಪ್ರೆಸ್ (20661) ಮಾರ್ಗ ಮಧ್ಯೆ 35 ನಿಮಿಷ ನಿಯಂತ್ರಣವಾಗಲಿದೆ. ತಾಳಗುಪ್ಪ– ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (20652) ಫೆ. 24 ಮತ್ತು 25ರಂದು 75 ನಿಮಿಷಗಳ ಕಾಲ ಹಾಗೂ ಚಿಕ್ಕಮಗಳೂರು–ಶಿವಮೊಗ್ಗ ಪ್ಯಾಸೆಂಜರ್ (56272) ರೈಲು ಅರ್ಧ ಗಂಟೆ ಕಾಲ ಮಾರ್ಗಮಧ್ಯೆ ವಿಳಂಬವಾಗಿ ಸಂಚರಿಸಲಿವೆ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.