ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮೈಸೂರು ವಿವಿ 106ನೇ ಘಟಿಕೋತ್ಸವ: 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ

Published : 4 ಜನವರಿ 2026, 5:21 IST
Last Updated : 4 ಜನವರಿ 2026, 5:21 IST
ಫಾಲೋ ಮಾಡಿ
Comments
- ‘ಪಿಂಚಣಿ ನೀಡಲು ಈಗಲೂ ಪರದಾಟ’
‘ಪಿಂಚಣಿಗೆ ಪರದಾಡುವ ಸ್ಥಿತಿ ಈಗಲೂ ಇದೆ. ನಮಗೆ ₹ 157 ಕೋಟಿ ಅಗತ್ಯವಿದ್ದು ಸರ್ಕಾರದಿಂದ ಬರುತ್ತಿರುವುದು ₹ 50 ಕೋಟಿ ಮಾತ್ರ. ಇದರಿಂದಾಗಿ ಸಮಸ್ಯೆ ಆಗುತ್ತಿದೆ. ಪದೇ ಪದೇ ಸರ್ಕಾರದ ಗಮನಕ್ಕೆ ತರಲಾಗುತ್ತಿದೆ. ನಮ್ಮಲ್ಲಿರುವ ಪಿಂಚಣಿ ನಿಧಿಯಲ್ಲಿ ನಿರ್ವಹಿಸುವಂತೆ ತಿಳಿಸಲಾಗಿತ್ತು. ಅದೂ ಹೋದ ವರ್ಷ ಖಾಲಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಪಿಂಚಣಿಗೆ ನೆರವು ಕಡಿಮೆಯಾಯಿತು. ಅದೇ ಈಗಲೂ ಮುಂದುವರಿದಿದೆ’ ಎಂದು ಲೋಕನಾಥ್‌ ಪ್ರತಿಕ್ರಿಯಿಸಿದರು. ‘ಹಿಂದೆ ನಮ್ಮ ವಿ.ವಿಯು ಶಿವಮೊಗ್ಗ ಮಂಗಳೂರುವರೆಗೆ ವ್ಯಾಪ್ತಿಯನ್ನು ಹೊಂದಿತ್ತು. ಈಗ ಮೈಸೂರು ಜಿಲ್ಲೆಗೆ ಸೀಮಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗಿದ್ದು ವರಮಾನದಲ್ಲಿ ಇಳಿಕೆಯಾಗಿದೆ. ಆದರೆ ಕ್ಯಾಂಪಸ್‌ ಪ್ರಮಾಣ ನೌಕರರ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಾಗಿ ನಿರ್ವಹಣೆ ಮೊದಲಾದವುಗಳಿಗೆ ಖರ್ಚು–ವೆಚ್ಚ ನಿಭಾಯಿಸಲು ಸರ್ಕಾರದ ಆರ್ಥಿಕ ನೆರವು ಅತ್ಯಗತ್ಯವಾಗಿದೆ. ಇದೆಲ್ಲವನ್ನೂ ಗಮನಕ್ಕೆ ತರಲಾಗಿದೆ. 14 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಲಭ್ಯ ಸಂಪನ್ಮೂಲದಲ್ಲಿ ನಿರ್ವಹಿಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT