ಮೈಸೂರು: ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಮೊದಲ ಪ್ರಯತ್ನವಾಗಿ ಮೈಸೂರು ವಿಶ್ವವಿದ್ಯಾಲಯವು 2020–21ನೇ ಶೈಕ್ಷಣಿಕ ಸಾಲಿನಿಂದ ಅಂಗವೈಕಲ್ಯ ಮತ್ತು ಪುನವರ್ಸತಿ ಅಧ್ಯಯನ ವಿಭಾಗವನ್ನು ಆರಂಭಿಸಲು ತೀರ್ಮಾನಿಸಿದೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯುಮೈಸೂರು ವಿ.ವಿ.ಗೆ ವಿಭಾಗವನ್ನು ಶುರುಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ದೈಹಿಕ ಶಿಕ್ಷಣ ವಿಭಾಗದ ಅಡಿಯಲ್ಲಿ ಈ ವಿಭಾಗವನ್ನು ಆರಂಭಿಸುವಂತೆ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

‘ಅಂಗವಿಲಕರ ಬಗ್ಗೆ ವಿಭಾಗದಲ್ಲಿ ಅಧ್ಯಯನ ನಡೆಯಲಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲಾಗುವುದು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

‘ಮೈಸೂರು ವಿ.ವಿ.ಯಲ್ಲಿ ಅಂಗವಿಕಲರ ಅಧ್ಯಯನಕ್ಕಾಗಿ ಈಗಾಗಲೇ ಸಾಕಷ್ಟು ಮೂಲಸೌಕರ್ಯಗಳಿವೆ. ಇವನ್ನು ಬಳಸಿಕೊಳ್ಳುವ ಜತೆಗೆ ಹೊಸ ಸೌಲಭ್ಯಗಳನ್ನೂ ಸೃಷ್ಟಿಸಿ ಅಂಗವಿಕಲರ ಶ್ರೇಯಸ್ಸಿಗೆ ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.