ನಂಜನಗೂಡು: ತಾಲ್ಲೂಕಿನ ಅಳಗಂಚಿಯ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಶನಿವಾರ ಬಾಯ್ಲರ್‌ನಿಂದ ಉತ್ಪಾದನಾ ವಿಭಾಗಕ್ಕೆ ಹೋಗುವ ಸ್ಟೀಮರ್‌ನ ಪೈಪ್ ಸ್ಫೋಟಗೊಂಡು ಅಪ್ಪಾಜಿ ಎಂಬ ಕಾರ್ಮಿಕನಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ.
ಸ್ಪೋಟದಿಂದ ಕಾರ್ಮಿಕ ಅಪ್ಪಾಜಿಯ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ಕಾರ್ಖಾನೆ, ಬಾಯ್ಲರ್‌ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದಿಲ್ಲ. ಬಾಯ್ಲರ್‌ಗಳ ಸುರಕ್ಷತೆಯ ಬಗ್ಗೆ, ಕಾರ್ಖಾನೆ ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ತಪಾಸಣೆ ನಡೆಸುವುದಿಲ್ಲ’ ಎಂದು ಸಹೋದ್ಯೋಗಿ ಕಾರ್ಮಿಕರು ದೂರಿದ್ದಾರೆ.