ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಅಳುತ್ತಾ ನಿಂತಿದ್ದ 10 ವರ್ಷದ ಬಾಲಕಿಯನ್ನು ಮಕ್ಕಳ ಸಹಾಯವಾಣಿ ಸಂಸ್ಥೆಯವರು ಸೋಮವಾರ ರಕ್ಷಿಸಿದ್ದಾರೆ.

ಕೊಡಗು ಜಿಲ್ಲೆ, ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಯಮುನಾ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ 10 ಗಂಟೆ ಸುಮಾರಿನಲ್ಲಿ ಅನಾಥವಾಗಿ ನಿಂತಿದ್ದಳು. ಇದನ್ನು ಗಮನಿಸಿದ ಮಕ್ಕಳ ಸಹಾಯವಾಣಿ ಸಂಸ್ಥೆಯ ದಾಕ್ಷಾಯಣಿ ಕೂಡಲೇ ಆ ಬಾಲಕಿಯನ್ನು ಸಮಾಧಾನ ಮಾಡಿ ಮಕ್ಕಳ ಸಹಾಯವಾಣಿ ಸಂಸ್ಥೆಗೆ
ಕರೆದೊಯ್ದರು.

ಬಾಲಕಿಯನ್ನು ಕೌನ್ಸೆಲಿಂಗ್
ಮಾಡಲಾಗಿ ‘ನನ್ನ ತಾಯಿ ಬಳ್ಳಾರಿಗೆ ಕರೆದೊಯ್ದು ಬಿಟ್ಟಳು. ಅಲ್ಲಿಂದ ರೈಲು ಹತ್ತಿ ಮೈಸೂರಿಗೆ ಬಂದೆ. ಹೊಟ್ಟೆ ಹಸಿವು ತಾಳಲಾರದೆ ನಗರದಲ್ಲಿ ಸುತ್ತುತ್ತಿದ್ದೆ’ ಎಂಬುದಾಗಿ ಬಾಲಕಿ ತಿಳಿಸಿದ್ದಾಳೆ ಎಂದು ಮಕ್ಕಳ ಸಹಾಯವಾಣಿ ಸಂಸ್ಥೆಯ ಸಮನ್ವಯಾಧಿಕಾರಿ ಅನಿಲ್ಕುಮಾರ್ ತಿಳಿಸಿದರು.

‘ಬಾಲಕಿಯನ್ನು ಸಂಸ್ಥೆಯ ತಾತ್ಕಾಲಿಕ ಮಕ್ಕಳ ತಂಗುದಾಣದಲ್ಲಿ ಇರಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಮಂಗಳವಾರ ಮುಂದೆ ಹಾಜರುಪಡಿಸಲಾಗುವುದು. ನಂತರ ಆಕೆಯ ಪೋಷಕರನ್ನು ಕರೆಸುವ ವ್ಯವಸ್ಥೆ ಮಾಡಲಾಗುವುದು’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.