ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ಬಸ್ ನಿಲ್ದಾಣ ಆಧುನೀಕರಣ

Last Updated 8 ಆಗಸ್ಟ್ 2011, 6:10 IST
ಅಕ್ಷರ ಗಾತ್ರ

ವಿಶೇಷ ವರದಿ
ನಂಜನಗೂಡು:
ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಕೈಗಾರಿಕೆ ಪಟ್ಟಣವಾದ ನಂಜನಗೂಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಆಧುನೀಕರಣದ ಕಾಮಗಾರಿ ಸದ್ದಿಲ್ಲದೆ ಸಾಗಿದೆ.

ಚಾಮರಾಜನಗರದಲ್ಲಿ ಒಂದು ವರ್ಷದ ಹಿಂದೆ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿ ಅಸ್ತಿತ್ವಕ್ಕೆ ಬಂದಿತು. ಅದುವರೆಗೂ ಮೈಸೂರು ನಗರ ವಿಭಾಗದಲ್ಲಿದ್ದ ನಂಜನಗೂಡು ಬಸ್ ನಿಲ್ದಾಣ ಮತ್ತು ಡಿಪೋ ಘಟಕವನ್ನು ಚಾಮರಾಜನಗರ ಕಚೇರಿ ಆಡಳಿತಕ್ಕೆ ವರ್ಗಾಹಿಸಲಾಯಿತು.

ಈಗ ನಂಜನಗೂಡು ಬಸ್ ನಿಲ್ದಾಣವನ್ನು ಅಂದಾಜು ರೂ.75 ಲಕ್ಷ ವೆಚ್ಚದಲ್ಲಿ ಆಧುನೀಕರಣ ಗೊಳಿಸುವ ಕ ಕಾಮಗಾರಿ ಕೈಗೆತ್ತಿ ಕೊಂಡಿದೆ. ಅದರಂತೆ ಬಸ್ ಸುತ್ತು ಹಾಕುವ ಆವರಣವನ್ನು ಕಾಂಕ್ರಿಟ್ ನೆಲವಾಗಿ ಪರಿವರ್ತಿಸುವ ಕೆಲಸ ಬಿರುಸಿ ನಿಂದ ಸಾಗಿದೆ. 30 ಸಾವಿರ ಚದರ ಅಡಿ ಆವರಣ ಕಾಂಕ್ರೀಟ್‌ಗೆ ಒಳಪಡುತ್ತಿದೆ.

ಕಟ್ಟಡದ 40 ಚದರ ಅಡಿ ನೆಲಕ್ಕೆ ಗ್ರಾನೈಟ್ ಕಲ್ಲು ಕೂರಿಸಲಾಗುತ್ತಿದೆ. ಪ್ರಯಾಣಿಕರು ಕೂರಲು ತ್ರಿ ಸೀಟರ್ ಮಾದರಿಯ 40 ಬೆಂಚು ಅಳವಡಿಸಲಾಗುತ್ತದೆ. ಮಹಿಳೆಯರ ನಿರೀಕ್ಷಣ ಕೊಠಡಿ, ಸಂಚಾರ ನಿಯಂತ್ರಕರ ಕೊಠಡಿ ಸೇರಿದಂತೆ ಪೂರ್ಣ ಕಟ್ಟಡದ ನವೀಕರಣ ಕಾಮಗಾರಿಯಲ್ಲಿ ಸೇರಿದೆ. ಬಸ್ ನಿಲ್ಲಲು 8 ಅಂಕಣ ನಿರ್ಮಿಸಲಾ ಗುತ್ತಿದೆ. ಮೈಸೂರು ಕಡೆಗೆ ಸಂಚರಿಸುವ ಅಂಕಣಕ್ಕೆ ವಿಶೇಷ ಒತ್ತು ಕೊಡಲಾಗುತ್ತಿದೆ. ಆಧುನಿಕ ವೇಳಾಪಟ್ಟಿ ಫಲಕ ಅಳವಡಿಸಲಾಗುತ್ತದೆ.

ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭವಾಗಿತ್ತು. ಆದರೆ, ಕಳೆದ ಮೇ ತಿಂಗಳಲ್ಲಿ ಇಲ್ಲಿಗೆ ಭೆಟಿ ನೀಡಿದ್ದ ಆಗಿನ ಜಿಲ್ಲಾಧಿಕಾರಿ  ಹರ್ಷಗುಪ್ತ, ಬಸ್ ಡಿಪೋ ಪಕ್ಕದಲ್ಲಿ ಹೊಸದಾಗಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ಚಾಲ್ತಿಯಲ್ಲಿದೆ. ಹಾಗಾಗಿ ಹಳೆ ಬಸ್ ನಿಲ್ದಾಣದ ನವೀಕರಣ ಬೇಡ ಎಂದು ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದರು.

ಹೊಸ ಬಸ್ ನಿಲ್ದಾಣ ಅಸ್ತಿತ್ವಕ್ಕೆ ಬರಲು ಇನ್ನೂ 2-3 ವರ್ಷ ಸಮಯ ಬೇಕಾಗಬಹುದು. ಅಲ್ಲಿವರೆಗೆ ಕಾಯುವದರಿಂದ ಹಳೆಬಸ್ ನಿಲ್ದಾಣದಲ್ಲಿ ಸಂಚಾರ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ತಕ್ಷಣಕ್ಕೆ ಹಳೆ ಬಸ್ ನಿಲ್ದಾಣ ನವೀಕರಿಸುವುದು ಅನಿವಾರ್ಯ ಎಂದು ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ನಿರ್ಧರಿಸಿದರು. ಅವರ ಅಣತಿಯಂತೆ ಈಗ ಕಾಮಗಾರಿ ಮತ್ತೆ ಚಾಲನೆ ಪಡೆದುಕೊಂಡಿದೆ.

ರಸ್ತೆ ನೀರು ನಿಲ್ದಾಣಕ್ಕೆ!: ಮಳೆಗಾಲದಲ್ಲಿ ಎಂಜಿಎಸ್ ರಸ್ತೆಯಲ್ಲಿ ಹರಿದು ಬರುವ ಮಳೆ ನೀರು ತಗ್ಗಿನಲ್ಲಿರುವ  ಕೆಎಸ್ಸಾರ್ಟಿಸಿ ಬಸ್ ನಿಲ್ದಾ ಣದ ಆವರಣವನ್ನು ಸೇರಿಕೊಂಡು ಕೆರೆ ಸೃಷ್ಟಿ ಮಾಡುತ್ತಿದೆ. ಎಂಜಿಎಸ್ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗಲು ನಿರ್ಮಿಸುರುವ ತೆರೆದ ಚರಂಡಿಯನ್ನು ಕೆಲವು ಕಿಡಿಗೇಡಿಗಳು ಮುಚ್ಚಿ ಹಾಕಿದ್ದಾರೆ. ಹೀಗಾಗಿ ರಸ್ತೆ ಮೇಲೆ ಬಿದ್ದ ಮಳೆ ನೀರು ತೂಬಿನಿಂದ ಹೊರ ಬಿಟ್ಟ ನಾಲೆ ನೀರಿನಂತೆ ನಿಲ್ದಾಣದ ಆವರಣವನ್ನು ವ್ಯಾಪಿಸಿಕೊಳ್ಳುತ್ತಿದೆ.

ಇದರಿಂದ ಪ್ರಯಾಣಿಕರು, ಬಸ್‌ಗಳ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಮಳೆ ನೀರು ತಪ್ಪಿಸುವ ನಿಟ್ಟಿನಲ್ಲಿ ಪುರಸಭೆ ಆಡಳಿತ ಕ್ರಮ ವಹಿಸಬೇಕು ಎಂದು ಚಾಮರಾಜನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ಜಿ. ಪಾರ್ಥಸಾರಥಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT