ಓಬವ್ವ ‍ಪಡೆಗೆ ಮರು ಚಾಲನೆ

ಸೋಮವಾರ, ಮೇ 27, 2019
24 °C

ಓಬವ್ವ ‍ಪಡೆಗೆ ಮರು ಚಾಲನೆ

Published:
Updated:

ಶಿವಮೊಗ್ಗ: ಹೆಣ್ಣುಮಕ್ಕಳ ಸುರಕ್ಷತೆ ಸಲುವಾಗಿ ಬೀದಿ ಕಾಮಣ್ಣರಿಗೆ ಲಗಾಮು ಹಾಕುವ ಓಬವ್ವ ಪಡೆಗೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಮರು ಚಾಲನೆ ನೀಡಿದರು.

ಓಬವ್ವ ಪಡೆ ಶಾಲೆ, ಕಾಲೇಜು, ಪಾರ್ಕ್‌, ಚಿತ್ರಮಂದಿರ ಹೆಣ್ಣುಮಕ್ಕಳು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಗಸ್ತು ತಿರುಗುತ್ತದೆ. ಹೆಣ್ಣು ಮಕ್ಕಳನ್ನು ಚುಡಾಯಿಸುವ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ, ಕಿರುಕುಳ ನೀಡುವವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿ, ಎಚ್ಚರಿಕೆ ನೀಡುತ್ತದೆ ಈ ಓಬವ್ವ ಪಡೆ. 

ಇದರಲ್ಲಿ ಮಹಿಳಾ ಪೊಲೀಸರೊಂದಿಗೆ ಪುರುಷ ಸಿಬ್ಬಂದಿಯೂ ಇರುತ್ತಾರೆ. ಸಂಜೆ ವೇಳೆ ಹೆಚ್ಚು ಗಸ್ತು ತಿರುಗಲಿದೆ. ಓಬವ್ವ ಪಡೆಯನ್ನು ಸಂಪರ್ಕಿಸಲು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ 948083349, ಕಂಟ್ರೋಲ್‌ ರೂಂ 9480803300, 261413ಗೆ ಕರೆ ಮಾಡಿ ನೆರವು ಪಡೆಯಬಹುದು.

2016ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರವಿ ಡಿ. ಚನ್ನಣ್ಣನವರ ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಓಬವ್ವ ವಾಹನಕ್ಕೆ ಚಾಲನೆ ನೀಡಿದ್ದರು. ಗಸ್ತು ತಿರುಗುತ್ತಿದ್ದಾಗ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಬೀದಿ ಕಾಮಣ್ಣರಿಗೆ, ಪೋಕರಿಗಳಿಗೆ ಈ ಪಡೆಯ ಬಗ್ಗೆ ಭಯ ಹುಟ್ಟಿತ್ತು. ಅವರು ವರ್ಗಾವಣೆ ಆದ ನಂತರ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿತ್ತು. ನಂತರ ಬಂದ ಅಭಿನವ್‌ ಖರೆ ಈ ಪಡೆಯ ಮರು ಚಾಲನೆಗೆ ಆಸಕ್ತಿ ತೋರಲಿಲ್ಲ. ಇಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಶ್ವಿನಿ ಆಸಕ್ತಿ ವಹಿಸಿ ಮತ್ತೆ ಓಬವ್ವ ಪಡೆಗೆ ಚಾಲನೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !