ಪ್ಲಾಸ್ಟಿಕ್‌ ತಿಂದು ಸಾಯುವ ಗೋವು ರಕ್ಷಿಸಿ

7

ಪ್ಲಾಸ್ಟಿಕ್‌ ತಿಂದು ಸಾಯುವ ಗೋವು ರಕ್ಷಿಸಿ

Published:
Updated:
Deccan Herald

ಮಾಗಡಿ: ಪಟ್ಟಣದ ಕಲ್ಯಾಬಾಗಿಲು ಬಳಿ ಕುಣಿಗಲ್‌ ರಸ್ತೆಯಂಚಿನಲ್ಲಿ ಕಸದ ರಾಶಿಯಲ್ಲಿ ಆಹಾರವನ್ನು ಹುಡುಕುತ್ತಿರುವ ದನಗಳ ಹಿಂಡು ಪ್ಲಾಸ್ಟಿಕ್‌ ತಿಂದು ಸಾವನ್ನಪ್ಪುವುದನ್ನು ತಪ್ಪಿಸಲು ಪುರಸಭೆ ಮುಂದಾಗಬೇಕು ಎಂದು ತಾಲ್ಲೂಕು ದಲಿತ ಸಂಘರ್ಷ ಸಮಿತಿಯ ಸಂಚಾಲಕ ಕೊಟ್ಟಗಾರಹಳ್ಳಿ ಉಮೇಶ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ ಕಸದ ರಾಶಿ ಬಿದ್ದಿದೆ. ಕಸವನ್ನು ಬರಿಕೈಯಲ್ಲಿ ಎತ್ತುವ ಗುತ್ತಿಗೆ ನೌಕರರಿಗೆ ಮೂರು ತಿಂಗಳಿಂದಲೂ ವೇತನ ನೀಡಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ಕಸ ತೆಗೆಯಲು ಗುತ್ತಿಗೆ ಆದಾರದ ಮೇಲೆ ಕೆಲಸ ಮಾಡುವ ಪೌರಕಾರ್ಮಿಕರು ಸಂಕಟ ಎದುರಿಸುತ್ತಿದ್ದಾರೆ. ಒಂದೆಡೆ ಗೋರಕ್ಷಕರು ಕಸದಲ್ಲಿ ಪ್ಲಾಸ್ಟಿಕ್‌ ತಿಂದು ಹಸು ನೀಗುತ್ತಿರುವ ರಾಸುಗಳನ್ನು ಕಂಡೂ ಕಾಣದಂತೆ ಮುನ್ನೆಡೆಯುತ್ತಿದ್ದಾರೆ. ಪ್ರಚಾರಕ್ಕಾಗಿ ಗೋರಕ್ಷಕರು ಎನ್ನುವ ಬದಲು, ಬೀದಿ ಬದಿಯಲ್ಲಿ ಪ್ಲಾಸ್ಟಿಕ್‌ ತಿಂದು ಸಾಯುತ್ತಿರುವ ಬಿಡಾಡಿ ದನಗಳನ್ನು ರಕ್ಷಿಸಬೇಕು. ಕಸದ ರಾಶಿಯನ್ನು ತೆಗೆಸಲು ಪುರಸಭೆ ಪ್ರತಿನಿಧಿಗಳು ಮನಸ್ಸು ಮಾಡಲಿ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !