ಚಿಕ್ಕಮಗಳೂರು: ಮತದಾರರಿಗೆ ಹಂಚಲು ಸೀರೆ ತರಲಾಗಿದೆ ಎಂಬ ಮಾಹಿತಿ ಮೇರೆಗೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ತಂಡವು ಕಾರ್ಯಾಚರಣೆ ನಡೆಸಿ ಜಯನಗರದ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ 666 ಸೀರೆಗಳನ್ನು ವಶಪಡಿಸಿಕೊಂಡಿದೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ ವಿ.ಮೇನಕಾ ನೇತೃತ್ವದ ತಂಡವು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದೆ. ಗುಜರಾತ್ ರಾಜ್ಯದ ಸೂರತ್‌ನ ದೂಅಂಜಿ ಸ್ಯಾರಿ ಫ್ಯಾಕ್ಟರಿ ಔಟ್‌ಲೆಟ್‌ನಿಂದ ಸೀರೆಗಳನ್ನು ರವಾನಿಸಲಾಗಿದೆ. ಚಿಕ್ಕಮಗಳೂರಿನ ಚಂದನ್‌ಕುಮಾರ್ ಎಂಬ ಹೆಸರಿಗೆ ಕಳಿಸಲಾಗಿದೆ.
‘ಫ್ಯಾಕ್ಟರಿಯವರು ವಿಳಾಸದಲ್ಲಿ ಚಂದನ್‌ಕುಮಾರ್ ಎಂದು ಹೆಸರು ನಮೂದಿಸಿದ್ದಾರೆ. ವಿಳಾಸದಲ್ಲಿ ಅವರ ಫೋನ್ ನಂಬರ್ ಇಲ್ಲ. ಆ ವ್ಯಕ್ತಿಯನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಲಭ್ಯವಾಗಿಲ್ಲ. ಸೀರೆಗಳನ್ನು ವಶಕ್ಕೆ ಪಡೆದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಅಧಿಕಾರಿ ಮೇನಕಾ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.