ಗುರುವಾರ , ಡಿಸೆಂಬರ್ 12, 2019
17 °C

ಏ.29 ರಂದು ರಂಗಾಯಣ ಬೇಸಿಗೆ ಶಿಬಿರ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಂಗಾಯಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಏ.29 ರಂದು ಬೆಳಿಗ್ಗೆ 9ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ.

ಚಿಣ್ಣರ ರಂಗೋತ್ಸವ ಅತ್ಯಂತ ಸಂಭ್ರಮದಿಂದ ನಡೆದಿದೆ. ಮಕ್ಕಳು ಈ ಶಿಬಿರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಮಾರೋಪದ ಅಂಗವಾಗಿ ಏ.29ಮತ್ತು 30 ರಂದು ಮಕ್ಕಳಿಂದಲೇ 8 ನಾಟಕ ಪ್ರದರ್ಶಿಸಲಾಗುವುದು ಎಂದು ರಂಗಾಯಣ ನಿರ್ದೇಶಕ ಡಾ.ಎಂ.ಗಣೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

248 ಮಕ್ಕಳು ಪ್ರವೇಶ ಪಡೆದಿದ್ದರು. 8 ತಂಡಗಳಾಗಿ ರಚಿಸಲಾಗಿತ್ತು. ಏ.29ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ 4 ನಾಟಕಗಳ ಪ್ರದರ್ಶನ ಇರುತ್ತದೆ. ಆಲದ ಮರದ ತಂಡ ‘ನಾನು ವಿಜ್ಞಾನಿಯಾಗುವೆ’ ಬೇವಿನ ಮರ ತಂಡ ‘ಕೃಷ್ಣಲೀಲೆ’ ಅರಳೀಮರ ತಂಡ ‘ನಮ್ಮ ಕಥೆ’ ಹಾಗೂ ತೆಂಗಿನ ಮರ ತಂಡ ‘ಬೇಲಿಯೇ ಎದ್ದು ಹೊಲ ಮೇಯ್ದರೆ’ ನಾಟಕ ಪ್ರದರ್ಶನ ಮಾಡುವರು.
ಏ.30 ರಂದು ಬೆಳಿಗ್ಗೆ 9 ರಿಂದ ಸಂಜೆ 6ರವರೆಗೆ ಮತ್ತೆ 4 ನಾಟಕಗಳ ಪ್ರದರ್ಶನ ಇರುತ್ತದೆ. ಹಲಸಿನ ಮರ ತಂಡ ‘ಬದುಕಿನ ಬಣ್ಣ’ ಶ್ರೀಗಂಧ ಮರ ತಂಡ ‘ಇರುವೆಗಳ ಯುದ್ಧ’ ಗಸೆಗಸೆ ತಂಡ ‘ಮೃಗ ಮತ್ತು ಸುಂದರಿ ನಾಟಕ’ ಮಾವಿನ ಮರ ತಂಡ ‘ಚಲಿಸುವ ಮರ’ ನಾಟಕ ಪ್ರದರ್ಶಿಸುವರು ಎಂದು ವಿವರ ನೀಡಿದರು.

29ರ ಬೆಳಿಗ್ಗೆ 9ಕ್ಕೆ ರಂಗಕರ್ಮಿ ದಿ.ಎಸ್.ಮಾಲತಿ ಅವರಿಗೆ ರಂಗ ನಮನ ಇರುತ್ತದೆ. ಸಾಗರದ ಪುರುಷೋತ್ತಮ ತಲವಾಟ ಸಮಾರೋಪ ಭಾಷಣ ಮಾಡುವರು. ಡಾ.ಕೆ.ಶರೀಫಾ, ಜಿ.ಆರ್.ಲವ, ಎಂ.ರಾಘವೇಂದ್ರ, ಆರ್.ಗಿರೀಶ್, ಶಫಿ ಸಾದುದ್ದೀನ್ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್, ನಿರ್ದೇಶಕ ಚಂದ್ರು ತಿಪಟೂರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)