ಭಾನುವಾರ, ಆಗಸ್ಟ್ 25, 2019
28 °C

ಸಿದ್ಧಾರ್ಥ ಸಾವಿನ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹ

Published:
Updated:
Prajavani

ಶಿವಮೊಗ್ಗ: ಉದ್ಯಮಿ ಸಿದ್ಧಾರ್ಥ ಸಾವಿನ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಗಂಧದ ಗುಡಿ ಫೌಂಡೇಷನ್ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಉದ್ಯಮಿ ಸಿದ್ದಾರ್ಥ ಸರಳ ಸ್ವಭಾವದವರು. ಕನ್ನಡಿಗರಿಗೆ ಸಾವಿರಾರು ಉದ್ಯೋಗ ಸೃಷ್ಟಿಸಿದ್ದರು. ನೂರಾರು ಕೋಟಿಗಳ ಒಡೆಯ. ಅಂತಃಕರಣದ ಮನುಷ್ಯ. ಇಂಥವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನಂಬುವುದೇ ಕಷ್ಟ. ಅವರ ಸಾವಿನ ಸುತ್ತ ಹಲವು ಅನುಮಾನಗಳಿವೆ. ಈ ಕುರತು ಸಂಪೂರ್ಣ ತನಿಖೆ ನಡೆಸಬೇಕು. ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.

ಐಟಿ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪ್ರಕರಣದ ಸುತ್ತ ಅನುಮಾನಗಳಿವೆ. ತನಿಖೆ ಮೂಲಕ ಸತ್ಯವೂ ಹೊರತರಬೇಕು ಎಂದು ಒತ್ತಾಯಿಸಿದರು.

ಫೌಂಡೇಷನ್ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ದರ್ಶನ್ ರಾಜ್, ಸಂಚಾಲಕರಾದ ಗೋಪಾಲ್, ಕಿರಣ್, ಪ್ರಹ್ಲಾದ್, ಮಹೇಂದ್ರ, ಹೇಮಂತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Post Comments (+)