ಭಾನುವಾರ, ಜನವರಿ 26, 2020
29 °C

ಪ್ರೋತ್ಸಾಹ ಧನ ಬಿಡುಗಡೆಗೆ ಆಶಾ ಕಾರ್ಯಕರ್ತೆಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಬಾಕಿ ಉಳಿಸಿಕೊಂಡಿರುವ ಪ್ರೋತ್ಸಾಹ ಧನ ತಕ್ಷಣ ಬಿಡುಗಡೆ ಮಾಡಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಂಸಿಟಿಎಸ್ ಚಟುವಟಿಕೆಗಳಿಗೆ ನಿಗದಿಯಾದ ಪ್ರೋತ್ಸಾಹಧನ ಕಳೆದ ಸೆಪ್ಟಂಬರ್‌ನಿಂದ ನೀಡಿಲ್ಲ. ಅಧಿಕಾರಿಗಳು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಒಬ್ಬೊಬ್ಬರಿಗೆ ಸರಾಸರಿ ತಿಂಗಳಿಗೆ ₨ 2,500 ನೀಡಬೇಕು. ಪ್ರತಿಯೊಬ್ಬರಿಗೂ ₨ 37,500 ಅನುದಾನ ಬಾಕಿ ಇದೆ. ಇದುವರೆಗೂ ₨ 300 ನೀಡಿದ್ದಾರೆ.ಲೆಕ್ಕಹಾಕಲು ವರ್ಷ ಬೇಕೆ? ಇನ್ನೆಷ್ಟು ಸಮಯಬೇಕು ಎಂದು ಪ್ರಶ್ನಿಸಿದರು.

ತಕ್ಷಣವೇ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಗೌರವಧನ ಕಡಿತ ಮಾಡಬಾರದು. ಇಲ್ಲದಿದ್ದರೆ ಕೆಲಸ ಸ್ಥಗಿತಗೊಳಿಸಿ, ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಪ್ರೇಮಾ, ಸಲಹೆಗಾರ ಮಂಜುನಾಥ ಕುಕ್ಕವಾಡ, ಪ್ರಮುಖರಾದ ಶೀಲಾಬಾಯಿ, ಸುನೀತಾ, ಚಂದ್ರಕಲಾ, ಆಶಾ, ವಸಂತ, ಜ್ಯೋತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು