ಸೋಮವಾರ, ಮಾರ್ಚ್ 1, 2021
23 °C

ಮಹಿಳಾ ಸಬಲೀಕರಣಕ್ಕೆ ಪ್ರತ್ಯೇಕ ಬ್ಯಾಂಕ್‌ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕನಕಪುರ: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರ ಅಪಾರ ಎಂದು ಹಿರಿಯ ಲೆಕ್ಕ ಪರಿಶೋಧಕ ಕೆ.ಉಮೇಶ್‌ ಕುಮಾರ್‌ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ನಡೆದ ಶ್ರೀಲಕ್ಷ್ಮೀ ವಿಲಾಸ್‌ ಮಹಿಳಾ ಕ್ರೆಡಿಟ್‌ ಕೋ–ಅಪರೇಟಿವ್‌ ಸೊಸೈಟಿಯ 2017–18ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಪಟ್ಟಣದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬ್ಯಾಂಕ್‌ ಇರಲಿಲ್ಲ, ಅಂತಹ ಸಂದರ್ಭದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್‌ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಾಧನೆ ಮಾಡಿದೆ ಎಂದರು.‌

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಸೌಭಾಗ್ಯ ಯು.ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸ್ತ್ರೀಶಕ್ತಿ, ಸ್ವ ಸಹಾಯ ಸಂಘಗಳಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿವೆ ಎಂದರು.

ಸಂಘದ ಅಭವೃದ್ದಿಗಾಗಿ ಎಲ್ಲ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಮತ್ತಷ್ಟು ದುಡಿಯಬೇಕಾಗಿದೆ. ಮಹಿಳೆಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಖಾತೆ ತೆರೆದು ವಹಿವಾಟು ನಡೆಸುವ ಮೂಲಕ ಪ್ರಗತಿ ಹೊಂದಬೇಕು ಎಂದರು.

ಸಂಘವು ಲೆಕ್ಕಪರಿಶೋಧನೆಯಲ್ಲಿ 'ಎ' ಗ್ರೇಡ್ ಸ್ಥಾನವನ್ನು ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಅರ್ಬನ್ ಕೋಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಪಿ.ರಾಮಚಂದ್ರು, ಹಾರೋಹಳ್ಳಿ ವ್ಯವಸ್ಥಾಪಕ ರವೀಂದ್ರ ಮಾತನಾಡಿ, ಮಹಿಳೆಯರು ಎಲ್ಲ ಸಂಕುಚಿತ ಮನೋಭಾವ ಬಿಟ್ಟು ಮುಂದೆ ಬಂದರೆ, ಉತ್ತಮವಾದ ಜೀವನ ಮಟ್ಟ ಪಡೆಯಬಹುದು ಎಂದರು.

ಕಾರ್ಯದರ್ಶಿ ಅಮೃತ್ ಪ್ರಕಾಶ್ ಸರ್ವಸದಸ್ಯರ ಸೂಚನಪತ್ರ ಮತ್ತು ವಾರ್ಷಿಕ ವರದಿ ಮಂಡಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.

ನಿರ್ದೇಶಕಿಯರಾದ ಎಂ.ಕಾವೇರಿ, ಪಿ.ರತ್ನಮ್ಮ, ಕೆ.ಎಸ್.ಜಯಂತಿ, ಎಸ್.ಪೂರ್ಣಿಮ, ಭಾಗ್ಯ, ಪದ್ಮ, ಟಿ.ಜಿ.ಉಮ, ಸಿ.ವಿ.ಭಾರತಿ ಸೇರಿದಂತೆ ನೌಕರ ವರ್ಗದವರು, ಸದಸ್ಯರು, ಷೇರುದಾರರ ಕುಟುಂಬದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು