ರಾಯಚೂರು: ಹಕ್ಕಿಜ್ವರ ಕಾಣಿಸಿಕೊಂಡು ಮಾಯವಾದ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ಇಪ್ಪತ್ತು ದಿನಗಳ ಅವಧಿಯಲ್ಲಿ 68 ಬೆಕ್ಕುಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, 38 ಬೆಕ್ಕುಗಳು ಪ್ರಾಣ ಕಳೆದುಕೊಂಡಿವೆ.

ಎಫ್ಪಿವಿ ಸೋಂಕಿನಿಂದ ಬಳಲುತ್ತಿರುವ ಬೆಕ್ಕುಗಳನ್ನು ಮಾಲೀಕರು ಚಿಕಿತ್ಸೆಗಾಗಿ ಪಾಲಿಕ್ಲಿನಿಕ್ಗೆ ತರುತ್ತಿದ್ದಾರೆ. ಹೊರರೋಗಿಗಳ ವಿಭಾಗದಲ್ಲಿ ಬೆಕ್ಕುಗಳಿಗೆ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಈ ಸೋಂಕಿನಿಂದ ಬೆಕ್ಕುಗಳು ತೀವ್ರವಾಗಿ ನಿರ್ಜಲೀಕರಣಗೊಳ್ಳುತ್ತಿವೆ. ಅತಿಯಾದ ಜ್ವರ ಹಾಗೂ ವೈರಸ್ಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದ ಕಾರಣ ಬೆಕ್ಕುಗಳು ಸಾವಿಗೀಡಾಗುತ್ತಿವೆ ಎಂದು ಪಶು ವೈದ್ಯರು ತಿಳಿಸಿದ್ದಾರೆ.

‘ಮಾರ್ಚ್ 1ರಂದು ಮೊದಲು ಒಂದು ಬೆಕ್ಕಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ನಿರಂತರವಾಗಿ ಮಾಲೀಕರು ತಮ್ಮ ಬೆಕ್ಕುಗಳನ್ನು ಚಿಕಿತ್ಸೆ ತರುತ್ತಿದ್ದಾರೆ. ಈ ವರೆಗೆ ಒಟ್ಟು 68 ಸೋಂಕಿತ ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಚಿಕಿತ್ಸೆ ಫಲಿಸದೇ 38 ಬೆಕ್ಕುಗಳು ಮೃತಪಟ್ಟಿವೆ. ಇದೀಗ ನಿತ್ಯ ಒಂದಿಬ್ಬರು ಮಾಲೀಕರು ತಮ್ಮ ಸಾಕು ಬೆಕ್ಕುಗಳನ್ನು ಪಾಲಿಕ್ಲಿನಿಕ್ಗೆ ಚಿಕಿತ್ಸೆಗಾಗಿ ತರುತ್ತಿದ್ದಾರೆ‘ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ರಾಯಚೂರು ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ.ಎಸ್.ಎಸ್.ಪಾಟೀಲ ಹೇಳಿದರು.

ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (ಎಫ್ಪಿವಿ) ವೈರಸ್ನಿಂದ ಬೆಕ್ಕುಗಳು ಇದ್ದಕ್ಕಿದ್ದಂತೆಯೇ ನಿತ್ರಾಣಗೊಳ್ಳುತ್ತಿವೆ. ಈ ವೈರಲ್ ಸೋಂಕು ಮೇಲ್ಮೈಯಲ್ಲಿ ದೀರ್ಘಕಾಲದವರೆಗೆ ಇರುವ ಕಾರಣ ಎಫ್ಪಿವಿ ಹೆಚ್ಚು ಮಾರಣಾಂತಿಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.