ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | 4,487 ಲೀಟರ್ ಮದ್ಯ ನಾಶ

Published 19 ಫೆಬ್ರುವರಿ 2024, 15:45 IST
Last Updated 19 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ರಾಯಚೂರು: ಫೆಬ್ರುವರಿ 17ರಂದು ವಿವಿಧ ಪ್ರಕರಣಗಳಲ್ಲಿ ಪೊಲೀಸರು ಜಪ್ತಿ ಮಾಡಿಕೊಂಡ  4,487 ಲೀಟರ್ ಮದ್ಯವನ್ನು ಸೋಮವಾರ ಅಬಕಾರಿ ಇಲಾಖೆಯ ಅಧಿಕಾರಿಗಳು ರಾಯಚೂರು-ಹೈದರಾಬಾದ್ ರಸ್ತೆಯ ಕೆಐಡಿಬಿಎಲ್ ಪ್ರದೇಶದಲ್ಲಿ ನಾಶಪಡಿಸಿದರು.

ಅಬಕಾರಿ ಉಪ ಆಯುಕ್ತ ರಮೇಶ ಕುಮಾರ ಅವರ ಆದೇಶದ ಮೇರೆಗೆ ರಾಯಚೂರು ವಲಯ ಮತ್ತು ಉಪ ವಿಭಾಗದಲ್ಲಿ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ದಾಖಲಿಸಿದ  ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿದ್ದ 907.51 ಲೀಟರ್ ಬಿಯರ್, 3677 ಲೀಟರ್ ಸೇಂದಿ,  961.6 ಕೆ.ಜಿ ಸಿ.ಎಚ್ ಪೌಡರ್, 6 ಕೆ.ಜಿ ವೈಟ್ ಪೇಸ್ಟ್, 500 ಗ್ರಾಂ ಸಕ್ಕರೆ, 01 ಕೆ.ಜಿ ಬಿಳಿ ಸುಣ್ಣ ಸೇರಿದಂತೆ ಒಟ್ಟು 4,487.59 ಲೀಟರ್ ಮದ್ಯ ನಾಸಪಡಿಸಲಾಯಿತು.

ತಹಶೀಲ್ದಾರ್ ಸುರೇಶ ವರ್ಮಾ, ರಾಯಚೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಬಿ.ಕೃಷ್ಣಹರಿ, ಅಬಕಾರಿ ನಿರೀಕ್ಷಕ ಸುರೇಶ ಶಂಕರ, ಕೆ.ಎಸ್.ಬಿ.ಸಿ.ಎಲ್ ಲಿಕ್ಕರ್ ಡಿಪೊದ ಸಹಾಯಕ ವ್ಯವಸ್ಥಾಪಕ ಚಂದ್ರಶೇಖರ ಗೌಡ, ಅಬಕಾರಿ ಉಪನಿರೀಕ್ಷಕ ನರೇಂದ್ರ, ರಾಚಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT