ಮಂಗಳವಾರ, ಅಕ್ಟೋಬರ್ 19, 2021
24 °C
ಶಕ್ತಿನಗರದಲ್ಲಿ ಮಲೆನಾಡ ವಾತಾವರಣ: ನೆಮ್ಮದಿ ನೀಡುವ ಮರಗಳು

ಕಾಲೊನಿ ತುಂಬ ಹಸಿರ ಉಸಿರು

ಉಮಾಪತಿ ರಾಮೋಜಿ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ಆರ್‌ಟಿಪಿಎಸ್‌ ಕಾಲೊನಿಯು ಹಸಿರು ವಾತಾವರಣದಿಂದ ತುಂಬಿದ್ದು ಆವರಣ ಪ್ರವೇಶಿಸಿದರೆ ಸಾಕು ಮಲೆನಾಡು ಪ್ರದೇಶದಂತೆ ಭಾಸವಾಗುತ್ತದೆ. ವಿದ್ಯುತ್ ಘಟಕಗಳ ಉತ್ಪಾದನೆಗೆ ಮಾತ್ರ ಗುರುತಿಸಿಕೊಳ್ಳದೇ ಹಸಿರ ಕಾಡು ಅರಳಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್‌) ಕಾಲೊನಿಯ ಪ್ರತಿಯೊಂದು ಬೀದಿಗಳಲ್ಲಿ, ಆಸ್ಪತ್ರೆ, ಶಾಲೆ, ಪೊಲೀಸ್ ಠಾಣೆ,ಹೆಲಿಪ್ಯಾಡ್‌ ಕ್ರೀಡಾಂಗಣ ಮತ್ತು ಉದ್ಯಾನವನಗಳಲ್ಲಿ ಹಸೀರಿಕರಣ ವಾತಾವರಣ ಮೈದೆಳೆದಿದೆ.

ಹಸಿರು, ಕೆಂಪು ಬಣ್ಣ ಸೇರಿ ವಿವಿಧ ಬಣ್ಣಗಳಿಂದ ಗಿಡ ಮರಗಳು, ಸಸಿಗಳು ಕಂಗೊಳಿಸುತ್ತವೆ. ಬೇವಿನ ಮರ, ಗುಲ್‌ಮಹರ್, ಆಲದ ಮರ ಸೇರಿದಂತೆ ವಿವಿಧ ಜಾತಿ ಹೂವುಗಳು, ಅಲಂಕಾರಿಕ ಸಸಿಗಳು ಇವೆ. ಕಾಲೊನಿಯಲ್ಲಿ ಬೆಳೆದಿರುವ ಮರಗಿಡಗಳು ನೂರಾರು ಜಾತಿಯ ಪಕ್ಷಿಗಳಿಗೆ ಆಶ್ರಯ ನೀಡಿವೆ.

ರಸ್ತೆಯುದ್ದಕ್ಕೂ ಸಾಲು ಸಾಲಾಗಿ ಕಾಣುವ ಗಿಡಗಳು ರಸ್ತೆಯ ಸೊಬಗನ್ನು ಹೆಚ್ಚಿಸಿವೆ. ಇತರ ಅಲಂಕಾರಿಕ ಗಿಡಗಳು ಪ್ರಯಾಣಿಕರು ಹಾಗೂ ವಾಹನ ಸವಾರರ ಗಮನ ಸೆಳೆಯುತ್ತವೆ ಎನ್ನುತ್ತಾರೆ ಶರಣು ಸವಳಗಿ.

ವಿದ್ಯುತ್‌ ಘಟಕಗಳಿಂದ ಹೊರ ಬರುವ ಪರಿಸರ ಮಾಲಿನ್ಯ ತಡೆಗಟ್ಟಲು ಹಲವು ವರ್ಷಗಳ ಹಿಂದೆ ಆರ್‌ಟಿಪಿಎಸ್‌ ಅಧಿಕಾರಿಗಳು ಮತ್ತು ನೌಕರರು ಆಸಕ್ತಿ ವಹಿಸಿ ರಸ್ತೆ ಬದಿಯ ಸ್ಥಳಗಳಲ್ಲಿ ಸಸಿಗಳನ್ನು ನೆಟ್ಟಿದ್ದರು. ಅಂದು ನೆಟ್ಟಿದ್ದ ಸಸಿಗಳು, ಈಗ ಗಿಡಗಳಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ ಎಂದು ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಹಕಾ ನಿರ್ದೇಶಕ ಕೆ.ವಿ.ವೆಂಕಟಚಲಾಪತಿ ಮಾಹಿತಿ ನೀಡಿದರು.

ಸಾಲು ಗಿಡಗಳು ಆಕರ್ಷಕವಾಗಿ ಕಾಣುವ ಮೂಲಕ ಶಕ್ತಿನಗರದ ಆರ್‌ಟಿಪಿಎಸ್ ಕಾಲೊನಿಯ ಸೌಂದರ್ಯವನ್ನು ಹೆಚ್ಚಿಸಿವೆ. ಬಿಡಾಡಿ ದನಗಳು ತಿನ್ನದಂತೆ ಹಾಗೂ ನೀರಿನ ಸಮಸ್ಯೆಯಿಂದ ಒಣಗದಂತೆ ಸಸಿಗಳ ನಿರ್ವಹಣೆ ಮಾಡಲಾಗುತ್ತಿದೆ. ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿ.ಯದ್ಲಾಪುರ ಗ್ರಾಮದ ದೇವಸ್ಥಾನಗಳಲ್ಲಿ,ರಸ್ತೆ ಬದಿಗಳಲ್ಲಿ ಬೇವು, ಹೊಂಗೆ ಸಸಿಗಳು ಸೇರಿ ₹4. 64 ಲಕ್ಷದ ವೆಚ್ಚದಲ್ಲಿ 980 ಸಸಿಗಳನ್ನು ನೆಡಲಾಗಿದೆ. ಹೂವುಗಳು ಸೇರಿ ಒಟ್ಟು 536 ವಿವಿಧ ಹೂವುಗಳ ಸಸಿಗಳನ್ನು ನೆಡಲಾಗುವುದು.ಗ್ರಾಮದಲ್ಲಿ ಕೂಡ ಹೆಚ್ಚು ಸಸಿ ನೆಟ್ಟು ಹಸಿರುಮಯ ಗ್ರಾಮವನ್ನಾಗಿ ಮಾಡುವುದಾಗಿ ಆರ್‌ಟಿಪಿಎಸ್‌ ಮಹಿಳಾ ಅಧಿಕಾರಿ ಪ್ರೇಮಲತಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು