ಭಾನುವಾರ, ನವೆಂಬರ್ 17, 2019
28 °C

ಸತ್ಯ ಪ್ರಮೋದತೀರ್ಥರ ಆರಾಧನೆ

Published:
Updated:
Prajavani

ಸಿಂಧನೂರು: ಸಿಂಧನೂರಿನ ಪಿಡಬ್ಯ್ಲೂಡಿ ಕ್ಯಾಂಪಿನಲ್ಲಿರುವ ಸತ್ಯಮಾರುತಿ ದೇವಸ್ಥಾನದಲ್ಲಿ ಸತ್ಯಪ್ರಮೋದತೀರ್ಥರ ಮಧ್ಯಾರಾಧನೆ ಗುರುವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಯೆ ನಿರ್ಮಾಲ್ಯ ವಿಸರ್ಜನೆ, ವಾಯುಸ್ತುತಿ ಪುನಶ್ಚರಣ, ಪಂಚಾಮೃತಾಭಿಷೇಕ, ಸತ್ಯ ಪ್ರಮೋದತೀರ್ಥರ ಚರಮಶ್ಲೋಕ ಪಾರಯಣ, ಮನ್ಯುಸೂಕ್ತ ಹೋಮ ನಡೆಯಿತು.

ಇದೇ ಸಂದರ್ಭದಲ್ಲಿ ಬೇವಿನಾಳ ಪ್ರಹ್ಲಾದಾಚಾರ ಇವರಿಂದ ಸತ್ಯಪ್ರಮೋದರ ಕುರಿತು ವಿಶೇಷ ಉಪನ್ಯಾಸ ನಡೆಯಿತು.

ಸಂಜೆ ವಿವಿಧ ಭಜನಾ ಮಂಡಳಿಗಳ ಭಜನೆ, ಸ್ವಸ್ತಿ ವಾಚನ, ತೊಟ್ಟಿಲು ಸೇವಾ ನಡೆದವು.

ದೇವಸ್ಥಾನದ ಅರ್ಚಕರಾದ ವೆಂಕಟಗಿರಿಯಾಚಾರ್ಯ, ಜಯತೀರ್ಥ ದಾಸ, ಎಂ.ಕೆ.ಗೌರ್ಕರ್, ಪ್ರಹ್ಲಾದಗುಡಿ, ಭಾರದ್ವಾಜ್ ಉಪ್ಪಳ, ಭೀಮಾಚಾರ ನವಲಿ, ಸತೀಶ್ ನವಲಿ, ವಾದಿರಾಜ ಕುಲಕರ್ಣಿ, ಅನಿಲಕುಮಾರ, ಗುರುರಾಜ್ ಲಕ್ಕಂದಿನ್ನಿ, ಕೆಂಗಲ್ ವೆಂಕಟೇಶಾಚಾರ್ಯ, ಅಡವಿರಾವ, ನಾರಾಯಣರಾವ, ಚೆನ್ನಳ್ಳಿ, ವಾಸುದೇವಾಚಾರ್ಯ ಉಪ್ಪಳ ಇದ್ದರು.

ಪ್ರತಿಕ್ರಿಯಿಸಿ (+)