ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೆಮ್ಮದಿಗೆ ಆಧ್ಯಾತ್ಮಿಕತೆ ಕಾರಣ’

Last Updated 14 ಡಿಸೆಂಬರ್ 2019, 14:28 IST
ಅಕ್ಷರ ಗಾತ್ರ

ರಾಯಚೂರು: ಸುಖ ಮತ್ತು ನೆಮ್ಮದಿಗೆ ಆಧ್ಯಾತ್ಮಿಕತೆ ಕಾರಣ. ಅಂತಹ ಆಧ್ಯಾತ್ಮ ಕ್ಷೇತ್ರ ಇಲ್ಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ನಗರದ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಹಾಗೂ ಮತ್ಸಮೀರಸಮಯ ಸಂವರ್ಧಿನೀ ಸಭೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ’ಹರಿದಾಸ ಸಾಹಿತ್ಯ’ ಸಮ್ಮೇಳನದಲ್ಲಿ ಮಾತನಾಡಿದರು.

ಕಾಮಧೇನು ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯ ಪವಿತ್ರ ಕ್ಷೇತ್ರ ಇದಾಗಿದೆ. ಕೇವಲ ಬ್ರಾಹ್ಮಣ ಸಮುದಾಯಕ್ಕಿಲ್ಲ. ಇಡೀ ಹಿಂದೂ ಸಮಾಜಕ್ಕೆ ಗಟ್ಟಿ ನೆಲೆಯಾಗಿ ನಿಂತವರು ಶ್ರೀ ಸುಬುಧೇಂದ್ರ ತೀರ್ಥರು. 12 ವರ್ಷಗಳ ಕಾಲ ಸುಧಾ ಪಠ್ಯ ಅಭ್ಯಸಿಸಿ ಪ್ರಾವೀಣ್ಯತೆ ಪಡೆದು ಪರೀಕ್ಷೆಗೆ ಒಳಗಾಗಿ ಸುಧಾ ಪಂಡಿತ್‌ ಎಂದು ಕರೆಯಿಸಿಕೊಳ್ಳುತ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪುಣ್ಯ ಎಂದರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ವೇದ ಉಪನಿಷತ್ತು ಕಲಿಯಲು ವಿದ್ಯಾರ್ಥಿಗಳಲ್ಲಿ ವಿಶೇಷ ಶ್ರದ್ಧೆ ಇರಬೇಕು. ಹೆಚ್ಚಿನ ಅಧ್ಯಾಯದಲ್ಲಿ ತೊಡಗಬೇಕು. ನಾಲ್ಕು ಜನ ವಿದ್ಯಾರ್ಥಿಗಳು ವೇದ ಉಪನಿಷತ್ ಅಧ್ಯಯನ ಮಾಡಿದ್ದಾರೆ. ಚಂದ್ರಿಕಾ ಗ್ರಂಥಕ್ಕೆ ಎಂಟು ವಾಕ್ಯಗಳು ಮಂಡನೆ ಮಾಡಿದ್ದಾರೆ. ನ್ಯಾಯಸುಧಾ ಮಂಗಳಕ್ಕೆ ಹತ್ತು ವಾಕ್ಯಗಳು ಮಂಡಿಸುವರು ಎಂದು ತಿಳಿಸಿದರು.

ಹನ್ನೆರಡು ವರ್ಷಗಳ ಕಾಲ ವೇದ ಅಧ್ಯಯನ ಮಾಡಿರುವ ಪ್ರಶಾಂತ ಕುಮಾರ ಬ್ರಹ್ಮ ಮತ್ತು ಬ್ರಹ್ಮಾಂಡ ಜಿಜ್ಞಾಸೆ ಮಂಡಿಸಿದರು. ವಿದ್ವಾಂಸರು ವಿದ್ಯಾರ್ಥಿಯೊಡನೆ ಚರ್ಚಿಸಿದರು.

ವಿರಾಜಪೇಟೆ ಕಣ್ವ ಮಠದ ವಿದ್ಯಾ ಶ್ರೀ ಕಣ್ವವಿರಾಜತೀರ್ಥರು, ರಘು ಭೂಷಣ ತೀರ್ಥರು, ಸಭಾ ಕಾರ್ಯದರ್ಶಿ ಡಾ.ರಾಜಾ ಎಸ್.ಗಿರಿಯಾಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT